Tuesday, August 4, 2026

BDA Apartments

Home Front Page ತಮ್ಮನ್ನ ಕೊಚ್ಚೆಗುಂಡಿ ಎಂದಿದ್ಧ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಗೆ ಅವರದ್ಧೇ ಧಾಟಿಯಲ್ಲಿ ಟಾಂಗ್ ಕೊಟ್ಟ ಶಾಸಕ ಸಾ.ರಾ.ಮಹೇಶ್.

ತಮ್ಮನ್ನ ಕೊಚ್ಚೆಗುಂಡಿ ಎಂದಿದ್ಧ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಗೆ ಅವರದ್ಧೇ ಧಾಟಿಯಲ್ಲಿ ಟಾಂಗ್ ಕೊಟ್ಟ ಶಾಸಕ ಸಾ.ರಾ.ಮಹೇಶ್.

ಮೈಸೂರು,ಜೂ,10,2020(www.justkannada.in): ತಮ್ಮನ್ನ ಕೊಚ್ಚೆಗುಂಡಿ ಎಂದು ಉಲ್ಲೇಖಿಸಿದ್ದಕ್ಕೆ ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ವಿರುದ್ದ ಮಾಜಿ ಸಚಿವ ಸಾ.ರಾ ಮಹೇಶ್ ಸಿಡಿದೆದ್ದಿದ್ದಾರೆ.

ಸಾ.ರಾ ಮಹೇಶ್ ಕೊಚ್ಚೆ. ಆಗಾಗಿ ಅದರ ಮೇಲೆ ಕಲ್ಲು ಎಸೆಯಲ್ಲ ಎಂಬ ಹೆಚ್‌.‌ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಸಾರಾ ಮಹೇಶ್, ಕೊಳಕು ಹಾಗೂ ಕೊಳಚೆ ಮನುಷ್ಯ ಯಾರು ಎಂದು ರಾಜ್ಯದ ಜನರಿಗೆ ಗೊತ್ತಿದೆ. ಕೊಚ್ಚೆ ಮನಸ್ಸು ಅನ್ನೋದು ಗೊತ್ತಿದೆ. ಹೆಚ್.‌ ವಿಶ್ವನಾಥ್ ಮನಸ್ಸು, ದೇಹ, ವ್ಯಕ್ತಿತ್ವ ಎಲ್ಲವೂ ಕೊಳಚೆ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್,  ನನ್ನನ್ನ ಕೊಚ್ಚೆಗುಂಡಿ ಎಂದು ವಿಶ್ವನಾಥ್ ಹೇಳಿದ್ದಾರೆ. ಯಾರು ಕೊಚ್ಚೆ ಮನಸ್ಥಿತಿಯವರು ಅಂತ ಜನರಿಗೆ ಗೊತ್ತಿದೆ. ನಾನು ಸತ್ಯ ಮಾತನಾಡಿದರೆ ಅವರ ಕಣ್ಣಿಗೆ ಕೊಚ್ಚೆ ಥರ ಕಾಣುತ್ತೇನೆ. ಅವರ ದೇಹ, ಮನಸ್ಸು, ವ್ಯಕ್ತಿತ್ವ ಎಲ್ಲವೂ ಕೊಳಚೆ ಎಂದು ವಾಗ್ದಾಳಿ ನಡೆಸಿದರು.former-minister-sa-ra-mahesh-h-vishwanath-puddle-mysore

ಇವರೇ ಕಾಂಗ್ರೆಸ್ ನಲ್ಲಿದ್ದಾಗ ತಳ ಸಮುದಾಯಕ್ಕೆ ವಿಧಾನಪರಿಷತ್ ಸದಸ್ಯರಾಗಿ ಮಾಡಿ ಅಂತಾ ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದಿದ್ದರು. ರಾಜ್ಯದ ಸೂಕ್ಷ್ಮಾತಿಸೂಕ್ಷ್ಮ ಸಮುದಾಯಕ್ಕೆ ಪರಿಷತ್‌ ಗೆ ಆಯ್ಕೆ ಮಾಡಿ ಎಂದಿದ್ದ ಮಾತು ಮರೆತುಹೋಯಿತೇ. ಈಗ ಅವರೇ ವಿಧಾನಪರಿಷತ್ ಸದಸ್ಯ ಆಗಲು ಲಾಬಿ ಮಾಡುತ್ತಿದ್ದಾರೆ. ಈ ಮೂಲಕ ಈಗ ಎಂಎಲ್‌ಸಿ ಆಗೋಕೆ ಹೊರಟಿದ್ದೀರಾ. ಇವರದ್ದು ಕೊಳಕು ರಾಜಕಾರಣ ಎಂದು ಹೆಚ್.ವಿಶ್ವನಾಥ್ ಗೆ ಅವರದ್ಧೇ ಧಾಟಿಯಲ್ಲೆ ಮಾತನಾಡಿ ಸಾ.ರಾ ಮಹೇಶ್ ಟಾಂಗ್ ನೀಡಿದರು.

Key words: Former minister- sa.ra Mahesh- H. Vishwanath- Puddle-mysore