Friday, September 18, 2026

BDA Apartments

ಬಿಬಿಎಂಪಿ ಚುನಾವಣೆಗೆ ಪಕ್ಷ ಸಿದ್ಧ- ಸಚಿವ ಬೈರತಿ ಬಸವರಾಜ್ BDA JK_Adv BDA Adv
Home Front Page ಬಿಬಿಎಂಪಿ ಚುನಾವಣೆಗೆ ಪಕ್ಷ ಸಿದ್ಧ- ಸಚಿವ ಬೈರತಿ ಬಸವರಾಜ್

ಬಿಬಿಎಂಪಿ ಚುನಾವಣೆಗೆ ಪಕ್ಷ ಸಿದ್ಧ- ಸಚಿವ ಬೈರತಿ ಬಸವರಾಜ್

ಬೆಂಗಳೂರು,ಅಕ್ಟೋಬರ್,1,2021(www.justkannada.in)  ಬಿಬಿಎಂಪಿ ಚುನಾವಣೆಗೂ ಬಿಜೆಪಿ ಸಿದ್ಧವಿದೆ. ಚುನಾವಣೆ ಎದುರಿಸಲು ನಾವೆಲ್ಲರೂ ಸಿದ್ದರಿದ್ದೇವೆ ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ  ಸಚಿವ ಭೈರತಿ ಬಸವರಾಜ್, ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲವೆಡೆ ವಾರ್ಡ್‍ಗಳು ಅತ್ಯಂತ ಹೆಚ್ಚು ಮತದಾರರನ್ನು ಹೊಂದಿವೆ. ಆದ್ದರಿಂದ ಈ ವಾರ್ಡ್‍ಗಳ ವ್ಯಾಪ್ತಿಯ ಮರು ವಿಂಗಡಣೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ವಿಧಾನಸಭೆಯ ಎರಡು ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಪಕ್ಷ ನಿರ್ಧರಿಸಲಿದೆ. ಇವೆರಡೂ ಕ್ಷೇತ್ರಗಳಲ್ಲಿ ಬಿಜೆಪಿ  ಜಯಭೇರಿ ಬಾರಿಸಲಿದೆ ಎಂದು ಸಚಿವ ಭೈರತಿ ಬಸವರಾಜ್  ವಿಶ್ವಾಸ ವ್ಯಕ್ತಪಡಿಸಿದರು.

Key words: Party -ready – BBMP -election- Minister -Birathi Basavaraj