ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿ ಡಾ. ವಿಲಾಸ್ ನಾಂದೋಡ್ಕರ್ ಗೆ ಪಿಹೆಚ್ ಡಿ ಪದವಿ.

ಬೆಂಗಳೂರು,ಅಕ್ಟೋಬರ್,1,2021(www.justkannada.in): ರಾಜ್ಯದ ಎರಡನೇಯ ಹಳೆಯ ವಿಶ್ವವಿದ್ಯಾಲಯವಾಗಿರುವ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಯಾಗಿರುವ ಡಾ. ವಿಲಾಸ್ ನಾಂದೋಡ್ಕರ್ ಅವರು ಮಂಡಿಸಿರುವ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ಪತ್ರಕರ್ತರು – ಒಂದು ಅಧ್ಯಯನ ಎಂಬ ವಿಷಯದ ಕುರಿತು ಮಂಡಿಸಿರುವ ಪ್ರೌಢ ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಲಭಿಸಿದೆ.

ಡಾ.ಸಂಜಯಕುಮಾರ್ ಮಾಲಗತ್ತಿ ಮಾರ್ಗದರ್ಶನದಲ್ಲಿ ನಡೆಸಿದ ಅಧ್ಯಯನ ಪತ್ರಕರ್ತರ ಜ್ವಲಂತ ಸಮಸ್ಯೆ, ಸವಲತ್ತುಗಳ ಕೊರತೆ, ಮುಂಬರುವ ವಿದ್ಯಮಾನಗಳ ಆತಂಕಗಳ ಕುರಿತು ಬೆಳಕು ಚೆಲ್ಲಿದೆ. ಪಿಹೆಚ್ ಡಿ ಪದವಿ ಪಡೆಯುವ ಮೂಲಕ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ  ವಿಲಾಸ್ ನಾಂದೋಡ್ಕರ್ ಅವರು ಈ ಹಿಂದೆ ಈಟಿವಿ ಕನ್ನಡ ನ್ಯೂಸ್ ಚಾನಲ್ ಹೈದರಾಬಾದ್ ಮತ್ತು ಟಿವಿ9 ಕನ್ನಡ ಹಾಗೂ ಸುವರ್ಣ ಸುದ್ದಿವಾಹಿನಿ ನಂತರ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

Key words: journalism -department.- PhD -Degree – Vilas Nandodkar-karnataka university