ಇಂದಿನಿಂದ ಸಂಸತ್ ಅಧಿವೇಶನ: ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಮನವಿ

ನವದೆಹಲಿ,ಜುಲೈ,20,2026 (www.justkannada.in):  ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಇಂದು ಸಂಸತ್ ಭವನದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಮಳೆಗಾಲ ಮತ್ತು ಅಧಿವೇಶನ ಎರಡೂ ಪ್ರಯೋಜನಕಾರಿಯಾಗಲಿದೆ. ದೇಶವು ಸುಧಾರಣಾ ಎಕ್ಸ್ ಪ್ರಸ್ ನೊಂದಿಗೆ ಸಾಗುತ್ತಿದೆ.  ಅನುಭವಿ ಸಂಸದರ ಜ್ಞಾನ ಅನುಭವ ದೇಶಕ್ಕೆ ಅಗತ್ಯವಿದೆ.  ಸದನದಲ್ಲಿ ವಿಚಾರಗಳಿಗೆ ಗೌರವ ನೀಡುತ್ತೀರಿ ಎಂಬ ಭರವಸೆ ಇದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ವಿಶ್ವದ ಮೇಲೆ ಪರಿಣಾಮ ಬೀರಿದೆ ಎಂದರು.

ಸಂಸತ್ತಿನ ಮುಂಗಾರು ಅಧಿವೇಶನವು ಇಂದಿನಿಂದ ಆಗಸ್ಟ್ 13 ರವರೆಗೆ ನಡೆಯಲಿದೆ. ಈ 25 ದಿನಗಳ ಅವಧಿಯಲ್ಲಿ ಒಟ್ಟು 19 ಕಲಾಪಗಳು ನಡೆಯಲಿದ್ದು, ಪ್ರಮುಖ ಮಸೂದೆಗಳ ಮಂಡನೆ ಹಾಗೂ ಮಣಿಪುರ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ರಾಷ್ಟ್ರೀಯ ವಿಷಯಗಳ ಕುರಿತು ತೀವ್ರ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.

Key words: Parliament session, PM Modi, appeals