Sunday, September 6, 2026

BDA Apartments

Home Front Page ದೆಹಲಿಯಲ್ಲಿ ಸಿಜೆಪಿಯಿಂದ ಸಂಸತ್ ಭವನ ಚಲೋ: ಪೊಲೀಸರಿಂದ ಲಾಠಿಚಾರ್ಜ್

ದೆಹಲಿಯಲ್ಲಿ ಸಿಜೆಪಿಯಿಂದ ಸಂಸತ್ ಭವನ ಚಲೋ: ಪೊಲೀಸರಿಂದ ಲಾಠಿಚಾರ್ಜ್

ಬೆಂಗಳೂರು,ಜುಲೈ,20,2026 (www.justkannada.in):  ನೀಟ್ ಅಕ್ರಮ ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ  ಪ್ರತಿಭಟನೆ ನಡೆಸುತ್ತಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದ್ದು  ಸಂಸತ್ ಭವನ ಚಲೋ ಹಮ್ಮಿಕೊಂಡಿದ್ದರು.

ಇದಕ್ಕೂ ಮುನ್ನ ಇದೀಗ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ.  ಪೊಲೀಸರ ಜೊತೆ ವಿದ್ಯಾರ್ಥಿಗಳ ತಳ್ಳಾಟ ನೂಕಾಟವಾಗಿದ್ದು ಜಂತರ್ ಮಂತರ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Key words: CJP, protest, Delhi, Police, lathicharge