Monday, September 28, 2026

BDA Apartments

ನಿರ್ಮಲಾ ಸೀತಾರಾಮನ್ ಮ್ಯಾರಥಾನ್ ಪ್ರೆಸ್ ಮಿಟ್: ಇಂದು ಸಂಜೆ ಕೂಡ ಸುದ್ದಿಗೋಷ್...
Home Front Page ನಿರ್ಮಲಾ ಸೀತಾರಾಮನ್ ಮ್ಯಾರಥಾನ್ ಪ್ರೆಸ್ ಮಿಟ್: ಇಂದು ಸಂಜೆ ಕೂಡ ಸುದ್ದಿಗೋಷ್ಠಿ

ನಿರ್ಮಲಾ ಸೀತಾರಾಮನ್ ಮ್ಯಾರಥಾನ್ ಪ್ರೆಸ್ ಮಿಟ್: ಇಂದು ಸಂಜೆ ಕೂಡ ಸುದ್ದಿಗೋಷ್ಠಿ

ದೆಹಲಿ, ಮೇ 15, 2020 (www.justkannada.in): ಪ್ರಧಾನಿ ಮೋದಿ ಘೋಷಣೆ ಮಾಡಿದ್ದ ಆರ್ಥಿಕ ಪ್ಯಾಕೇಜ್‌ಗೆ ಸಂಬಂಧಪಟ್ಟಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೂಡ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ವಿತ್ತ ಸಚಿವೆ ಸುದ್ದಿಗೋಷ್ಠಿ ನಿಗದಿಪಡಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ಅಧಿಕೃತ ಟ್ವಿಟ್ಟರ್ ಖಾತೆ ಪ್ರಕಟಿಸಿದೆ.

ಈಗಾಗಲೇ ನಿರ್ಮಲಾ ಸೀತಾರಾಮನ್ ಅವರು ಸತತ ಎರಡು ದಿನ ಸುದ್ದಿಗೋಷ್ಠಿ ನಡೆಸಿ, ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಹೇಗೆ ಯೋಜನೆಗಳನ್ನು ರೂಪಿಸಿದೆ ಎಂದು ವಿವರಣೆ ನೀಡಿದ್ದಾರೆ.

ಇದೀಗ, ಅದರ ಮುಂದುವರಿದ ಭಾಗವಾಗಿ ಮೇ 15 ರಂದು ಕೂಡ ಮತ್ತಷ್ಟು ವಿವರಣೆ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಭಾನುವಾರವರೆಗೂ ಪ್ರತಿದಿನವೂ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರಂತೆ.