Monday, September 28, 2026

BDA Apartments

ಭಾರತದ ನೆರವಿಗೆ ಬಂದ ವಿಶ್ವ ಬ್ಯಾಂಕ್: 1 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಣೆ BDA JK_Ad...
Home Front Page ಭಾರತದ ನೆರವಿಗೆ ಬಂದ ವಿಶ್ವ ಬ್ಯಾಂಕ್: 1 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಣೆ

ಭಾರತದ ನೆರವಿಗೆ ಬಂದ ವಿಶ್ವ ಬ್ಯಾಂಕ್: 1 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಣೆ

ದೆಹಲಿ, ಮೇ 15, 2020 (www.justkannada.in): ವಿಶ್ವ ಬ್ಯಾಂಕ್ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಭಾರತದ ನೆರವಿಗೆ ಬಂದಿದೆ.

ವಿಶ್ವ ಬ್ಯಾಂಕ್ ಭಾರತಕ್ಕೆ ಆರ್ಥಿಕ ನೆರವು ನೀಡುವ ಘೋಷಣೆ ಮಾಡಿದೆ. ವಿಶ್ವ ಬ್ಯಾಂಕ್, ಭಾರತಕ್ಕೆ ಒಂದು ಬಿಲಿಯನ್ ಡಾಲರ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಿಸಿದೆ. ಇದ್ರಿಂದ ಭಾರತಕ್ಕೆ ಆರ್ಥಿಕ ನೆರವು ಸಿಗಲಿದೆ.

 

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗ್ತಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೆರವಾಗಲು 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.