Monday, September 28, 2026

BDA Apartments

ಮೇ 17ರವರೆಗೆ ಬಿಎಂಟಿಸಿ ಸಿಬ್ಬಂದಿ ಆರೋಗ್ಯ ತಪಾಸಣೆ BDA JK_Adv BDA Adv
Home Front Page ಮೇ 17ರವರೆಗೆ ಬಿಎಂಟಿಸಿ ಸಿಬ್ಬಂದಿ ಆರೋಗ್ಯ ತಪಾಸಣೆ

ಮೇ 17ರವರೆಗೆ ಬಿಎಂಟಿಸಿ ಸಿಬ್ಬಂದಿ ಆರೋಗ್ಯ ತಪಾಸಣೆ

ದೆಹಲಿ, ಮೇ 15, 2020 (www.justkannada.in): ಬೆಂಗಳೂರು, ಬಿಎಂಟಿಸಿ ಸಿಬ್ಬಂದಿಯ ಆರೋಗ್ಯ ತಪಾಸಣೆಗೆ ಒಳಪಡಿಸಲು ಸಂಸ್ಥೆ ನಿರ್ಧರಿಸಿದೆ.

ಹೌದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇಂದಿನಿಂದ ಮೇ 17ರ ವರೆಗೆ ಪ್ರತಿ ವಲಯದಲ್ಲಿ 100 ರಿಂದ 150 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಸೂಚಿಸಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಎಲ್ಲ ಸಿಬ್ಬಂದಿಯನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಆವಶ್ಯಕವಾಗಿದ್ದು, ಅದಕ್ಕಾಗಿ ವೈದ್ಯಕೀಯ ತಂಡಗಳನ್ನು ರಚಿಸಲಾಗಿದೆ.

ಇಂದಿನಿಂದ ಬೆಳಗ್ಗೆ 9.30 ಯಿಂದ ಸಂಜೆ 5.30ರ ವರೆಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಎಂದು ಬಿಎಂಟಿಸಿ (ಭದ್ರತಾ ಮತ್ತು ಜಾಗ್ರತಾ) ನಿರ್ದೇಶಕರು ತಿಳಿಸಿದ್ದಾರೆ.