ಬೆಂಗಳೂರು, ಮೇ 15, 2020 (www.justkannada.in): ಮುತ್ತಪ್ಪ ರೈ ಅಂತ್ಯ ಸಂಸ್ಕಾರಕ್ಕೆ ಬರಬೇಡಿ ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಕುರಿತು ಮನವಿ ಪತ್ರವನ್ನು ಸಂಘಟನೆ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಹೀಗಿದೆ ಆ ಮನವಿ ಪತ್ರ…
ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮತ್ತು 4R ಗ್ರೂಪ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥ ಎನ್ ಮುತ್ತಪ್ಪ ರೈ ದೇರ್ಲ (2-05-1952 to 15-05- 2020) ಬೆಳಗ್ಗಿನ ಜಾವ ಎರಡು ಗಂಟೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಬ್ಬರು ಮಕ್ಕಳು, ಮೂವರು ತಮ್ಮಂದಿರು , ಒಬ್ಬ ತಂಗಿ , ಕುಟುಂಬ ವರ್ಗ ಮತ್ತು ಅಪಾರವಾದ ಅಭಿಮಾನಿಗಳನ್ನು ಮತ್ತು ಬಂಧುವರ್ಗವನ್ನು ತ್ಯಜಿಸಿದ್ದಾರೆ . COVID-19 ನಿಯಮಾವಳಿ ಪ್ರಕಾರ ಕೇವಲ ಇಪ್ಪತ್ತೈದು ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ ಬಿಡದಿಯ ಸ್ವಗ್ರಹದಲ್ಲಿ ಮಧ್ಯಾಹ್ನದ ಮೇಲೆ ಕುಟುಂಬ ಸದಸ್ಯರಿಂದ ಮಾತ್ರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ.
ಅಂತ್ಯಕ್ರಿಯೆ ವಿಧಿ ವಿಧಾನದಲ್ಲಿ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಯಾರಿಗೂ ಭಾಗವಹಿಸಲು ಅವಕಾಶವಿರುವುದಿಲ್ಲ . ಆದ್ದರಿಂದ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ .
-ಪದಾಧಿಕಾರಿಗಳು
ಜಯ ಕರ್ನಾಟಕ, ಬೆಂಗಳೂರು