ಕನ್ನಂಬಾಡಿ ಕಾಂಟ್ರೋವರ್ಸಿ : ರಾಜ್ರಕಾಲ್ದಲ್ಲಿ ನಿರ್ಮಾಣ ಮಾಡಿದ್ರಿಂದ ಇನ್ನು ಇದೆ, ಬಹುಶಃ ರಾಜಕಾರಣಿಗಳ ಕಾಲದಲ್ಲಾಗಿದ್ರೆ ಇಷ್ಟೊತ್ತಿಗೆ ಬಿದ್ಹೋಗ್ತಿತ್ತು : ಎಚ್. ವಿಶ್ವನಾಥ್

 

ಮೈಸೂರು, ಜು.09, 2021 : (www.justkannada.in news) ಕನ್ನಂಬಾಡಿ ಅಂತರಾಷ್ಟ್ರೀಯ ಪ್ರವಾಸಿ ತಾಣ.
ಜನರ ನಡುವಿನ ಭಾವನಾತ್ಮಕ ಸಂಕೇತ ಅಂತಾ ಇಂದು ಉಳಿದಿದ್ದರೆ ಅದು ಕನ್ನಂಬಾಡಿ ಮಾತ್ರ ಎಂದು ಹಿರಿಯ ರಾಜಕಾರಣಿ, ಬಿಜೆಪಿ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು…

jk

ರಾಜಪ್ರಭುತ್ವದ, ಪ್ರಜೆಗಳ ನಡುವಿನ ಸಂಕೇತ ಕನ್ನಂಬಾಡಿ. ಇದು ನಿರ್ಮಾಣವಾಗುವ ವೇಳೆ ಬಹಳಷ್ಟು ತ್ಯಾಗ ನಡೆದಿದೆ. ಸಾಕಷ್ಟು ಗ್ರಾಮಗಳು ಮುಳುಗಡೆ ಆಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಏನೇನೋ ಮಾತನಾಡುತ್ತಿದ್ದಾರೆ. ಹೀಗಾಗಿಯೇ ಕನ್ನಂಬಾಡಿ ಬಗ್ಗೆ ಮಾತನಾಡಬೇಕು ಎನಿಸಿದೆ.

ಕನ್ನಂಬಾಡಿ ನಮ್ಮ ಅಭಿಮಾನದ ಸಂಕೇತ. ರಾಜಮನೆತನದ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನು ಮಾರಿ ಈ ಹಣೆಕಟ್ಟೆಗೆ ದುಡ್ಡು ಕೊಟ್ಟಿದ್ರು. ಸುಮಾರು 70 ಲಕ್ಷ ಹಣವನ್ನ ರಾಜಮನೆತನದ ಹೆಣ್ಣುಮಕ್ಕಳು ಬೊಂಬಾಯಿಗೆ ಹೋಗಿ ಮಾರಿ ತಂದುಕೊಟ್ಟರು. ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದಲೂ ಡ್ಯಾಂ ನಿರ್ಮಾಣಕ್ಕೆ ವಸ್ತುಗಳು ಬಂದಿವೆ. ಬೇರೆ ಬೇರೆ ದೇಶದ ಇಂಜಿನಿಯರ್ಸ್, ಸರ್. ಎಂ‌.ವಿ ಅವ್ರ ಬುದ್ಧಿಶಕ್ತಿ ಇಲ್ಲಿ ಬಳಕೆಯಾಗಿದೆ. ಇಂಥ ಕನ್ನಂಬಾಡಿಯಲ್ಲಿ ಇದೀಗ ಬಿರುಕು ಬಿಟ್ಟಿದೆ ಅನ್ನೋದು ಆತಂಕ ತಂದಿದೆ.

ರಾಜ ಪ್ರಭುತ್ವದಲ್ಲಿ ನಿರ್ಮಾಣ ಆಗಿದ್ದಕ್ಕೆ ಬಿರುಕು ಬಿಟ್ಟಿಲ್ಲ. ಬಹುಶಃ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಮಾಣವಾಗಿದ್ರೆ ಕಮಿಷನ್, ಕಿಕ್ ಬ್ಯಾಕ್ ತಗೊಂಡು ನಿರ್ಮಾಣ ಮಾಡ್ತಿದ್ರು. ಹಾಗಾಗಿ, ಈವಾಗ ನಿರ್ಮಾಣವಾಗಿದ್ರೆ ಇಷ್ಟೊತ್ತಿಗೆ ಬಿದ್ದೊಗ್ತಾಇತ್ತೇನೊ ಎಂದು ವ್ಯಂಗ್ಯವಾಡಿದರು.
ಸಂಸದೆ ಸುಮಲತಾ, ಬಿರುಕು ಬಿಟ್ಟಿದೆ ಅಂತಾರೇ, ಮಾಜಿ ಸಿಎಂ ಕುಮಾರಸ್ವಾಮಿ ಬಿರುಕು ಬಿಟ್ಟಿಲ್ಲ ಅಂತಾರೇ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಜತೆಗೆ ಈ ವಿಷಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಉಸಿರು ನಿಂತೋಗಿದೆ. ಇದಕ್ಕೆ ಯಾಕೆ ಬೇಕು ಉಸ್ತುವಾರಿ ಮಂತ್ರಿ ಸ್ಥಾನ. ಸುದ್ದಿ ಗೋಷ್ಠಿಯಲ್ಲಿ ಹೆಚ್.ವಿಶ್ವನಾಥ್ ಪ್ರಶ್ನೆ.

ಇಷ್ಟೊತ್ತಿಗಾಗಲೇ ಮುಖ್ಯಮಂತ್ರಿಗಳು ಟೆಕ್ನಿಕಲ್ ಟೀಮ್, ಗಣಿ ಟೀಮ್, ನೀರಾವರಿ ಇಲಾಖೆ ಟೀಮ್ ಗಳನ್ನು ಕಳಿಸಬೇಕಾಗಿತ್ತು . ಅವರೆಲ್ಲಾ ಬಂದು ಡ್ಯಾಮ್ ಬಳಿ ಬೀಡು ಬಿಡಬೇಕಾಯ್ತು.ಆದರೆ ಯಾರಿಗೂ ಇದರ ಗಂಭೀರತೆಯೇ ತಿಳಿಯುತ್ತಿಲ್ಲ.
ಜನ್ರು ಆತಂಕದಲ್ಲಿ ಇದ್ದಾರೆ. ಸರ್ಕಾರ ಸತ್ತೊಗಿದ್ಯ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ.

key words: mysore-h.vishwanath-KRS-DAM-jds-sumalatha-MP
——————–