ಟೀಂ ಇಂಡಿಯಾ ವೇಗಿ ಬುಮ್ರಾ- ಅನುಪಮ ಕಲ್ಯಾಣ?!

ಬೆಂಗಳೂರು, ಮಾರ್ಚ್ 08, 2021 (www.justkannada.in): ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಶೀಘ್ರದಲ್ಲೇ ಹಸಮಣೆ ಏರಲಿದ್ದಾರೆ.

ಹೌದು. ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು ಟಿ20 ಹಾಗೂ ಏಕದಿನ ಪಂದ್ಯಗಳಿಂದಲೂ ಹೊರುಗಳಿಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾರಣ ಅವರ ಮದುವೆ ಎನ್ನಲಾಗುತ್ತಿದೆ.

ನಟಸಾರ್ವಭೌವ ಚಿತ್ರದಲ್ಲಿ ನಟಿಸಿದ್ದ ಅನುಪಮ ಜೊತೆ ಬುಮ್ರಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಐಪಿಎಲ್​, ಐಸಿಸಿ ವಿಶ್ವಕಪ್​ ಟೂರ್ನಿಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವ ದಕ್ಷಿಣ ಭಾರತದ ಸಂಜನಾ ಗಣೇಶನ್ ಹೆಸರೂ ಬುಮ್ರಾ ಕೇಳಿಬರುತ್ತಿದೆ.

ಆದರೆ ಯಾರ ಜತೆ ಬುಮ್ರಾ ಹಸೆಮಣೆ ಏರಲಿದ್ದಾರೆ ಎಂಬುದು ಎನ್ನು ಖಚಿತವಾಗಿಲ್ಲ. ಆದರೆ ಅನುಪಮ ಗುಜರಾತ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಅನುಪಮ-ಬುಮ್ರಾ ಕಲ್ಯಾಣ ಖಚಿತ ಎನ್ನಲಾಗಿದೆ.