ಸಾಹಿತಿ ಜಿ.ಎಸ್.ಅಮೂರ ನಿಧನಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಸಂತಾಪ

ಬೆಂಗಳೂರು,ಸೆಪ್ಟೆಂಬರ್,28,2020(www.justkannada.in) : ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಜಿ.ಎಸ್.ಅಮೂರ ಅವರ ನಿಧನಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಸಂತಾಪ ಸೂಚಿಸಿದ್ದಾರೆ.jk-logo-justkannada-logo

ಖ್ಯಾತ ವಿಮರ್ಶಕ ಜಿ.ಎಸ್. ಅಮೂರ (96) ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಮೂರು ವಾರಗಳ ಹಿಂದೆಯಷ್ಟೇ ನೃಪತುಂಗ ಪ್ರಶಸ್ತಿಗೆ ಅಮೂರ ಭಾಜನರಾಗಿದ್ದರು ಎಂದು ಸ್ಮರಿಸಿದ್ದಾರೆ.

key words : Death-G.S.Amura-Kasapa-President-Manu baligar-condolences