ಮೈಸೂರು ಮಹಾನಗರ ಪಾಲಿಕೆ ಅತಿಥಿ‌ಗೃಹಗಳು ಇನ್ಮುಂದೆ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್…

ಮೈಸೂರು,ಜು,9,2020(www.justkannada.in): ಮೈಸೂರು ಜಿಲ್ಲೆಯಲ್ಲಿ  ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗೆ ಮೈಸೂರು ಜಿಲ್ಲಾಡಳಿತ ಬಿಗಿ ಕ್ರಮಗಳನ್ನ ಕೈಗೊಂಡಿದೆ. ಈ ಮಧ್ಯೆ ಜಿಲ್ಲಾಡಳಿತಕ್ಕೆ ಹೊರ ಆಗದ ರೀತಿ ಮೈಸೂರು ಮಹಾನಗರ ಪಾಲಿಕೆ ಒಂದು ಹೆಜ್ಜೆ ಮುಂದೆ ಬಂದಿದೆ. ಹೌದು, ರಾಜ್ಯದಲ್ಲಿ ಮೊದಲ‌ ಬಾರಿಗೆ ಮೈಸೂರಿನಲ್ಲಿ  ಪಾಲಿಕೆಯಿಂದ ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಲಾಗಿದೆ.jk-logo-justkannada-logo

ಮೈಸೂರು ಮಹಾನಗರ ಪಾಲಿಕೆ ಅತಿಥಿ‌ಗೃಹಗಳು ಇನ್ಮುಂದೆ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದು, ಪಾಲಿಕೆ ಅತಿಥಿ ಗೃಹ ಹಾಗೂ ಎರಡು ಬಿಸಿಎಂ ವಿದ್ಯಾರ್ಥಿ ‌ನಿಲಯಗಳನ್ನ ಪಾಲಿಕೆ ಸುಪರ್ದಿಗೆ ನೀಡಲಾಗಿದೆ. ಪಾಲಿಕೆಯಲ್ಲಿ ಪೌರಕಾರ್ಮಿಕರು, ಸಿಬ್ಬಂದಿ ಪಾಲಿಕೆ ಸದಸ್ಯರಿಗೆ ಸೊಂಕು ತಗಲಿದರೂ  ಇಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಅಸಿಮ್ಟಮ್ಯಾಟಿಕ್ ಇರುವ ಸೊಂಕಿತರಿಗೆ ಇಲ್ಲೇ ಚಿಕಿತ್ಸೆ ನೀಡಲಾಗುತ್ತದೆ.mysore-city-corporation-temporary-covid-care-center

ಚಿಕಿತ್ಸೆ ಖಾಸಗಿ ಅಸ್ಪತ್ರೆ ವೈದ್ಯರು ಸಹಕಾರ ನೀಡಲಿದ್ದು  ಹೋಂ ಕ್ವಾರೆಂಟನ್ ನಲ್ಲಿ ಇರುವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್ ಕೇರ್ ಸೆಂಟರ್ ಮಾಡುತ್ತಿರುವ ಹಿನ್ನೆಲೆ ಸಿಬ್ಬಂದಿ ಪಾಲಿಕೆ ಕಟ್ಟಡವನ್ನು ಸ್ವಚ್ಚಗೊಳಿದ್ದು, ಕೋವಿಡ್ ಅಸ್ಪತ್ರೆಯಲ್ಲಿ ಇರುವ ಕೆಲ ಸೋಂಕಿತರನ್ನು ಪಾಲಿಕೆ ಕೋವಿಡ್ ಕೇಂದ್ರಕ್ಕೆ ಶಿಫ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಆಹಾರದ ವ್ಯವಸ್ಥೆಗೆ ಸಿದ್ದತೆ ಮಾಡಲಾಗಿದೆ.

Key words: Mysore city corporation- Temporary -Covid Care Center.