Friday, October 23, 2026

Dasara Wishes

Happy Dasara
Home Front Page ಮೈಸೂರು ರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಯುಕ್ತೇಶಾನಂದಜಿ ಮಹಾರಾಜ್ ಅಧಿಕಾರ ಸ್ವೀಕಾರ

ಮೈಸೂರು ರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಯುಕ್ತೇಶಾನಂದಜಿ ಮಹಾರಾಜ್ ಅಧಿಕಾರ ಸ್ವೀಕಾರ

ಮೈಸೂರು ರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಯುಕ್ತಶಾನಂದಜಿ ಮಹಾರಾಜ್ ಅಧಿಕಾರ ಸ್ವೀಕಾರ

ಮೈಸೂರು,ಅಕ್ಟೋಬರ್,23,2026 (www.justkannada.in): ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರು ಆಶ್ರಮದ ಜವಾಬ್ದಾರಿಯನ್ನು ಸ್ವಾಮಿ ಯುಕ್ತೇಶಾನಂದಜಿ ಮಹಾರಾಜ್ ಅವರಿಗೆ ಹಸ್ತಾಂತರಿಸಿದರು.

ದೇವಸ್ಥಾನದಲ್ಲಿ ನಡೆದ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಆಶ್ರಮದ ಸಾಧುಗಳು, ಭಕ್ತರು, ಸ್ವಯಂಸೇವಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.ಮೈಸೂರು ರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಯುಕ್ತಶಾನಂದಜಿ ಮಹಾರಾಜ್ ಅಧಿಕಾರ ಸ್ವೀಕಾರ

ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ನ ಟ್ರಸ್ಟಿಯಾಗಿರುವ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರು ಹಲವು ದಶಕಗಳಿಂದ ರಾಮಕೃಷ್ಣ ಸಂಘದ ವಿವಿಧ ಕೇಂದ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆಧ್ಯಾತ್ಮಿಕ ಸಾಧನೆ, ಶಿಕ್ಷಣ ಮತ್ತು ಸಮಾಜಸೇವೆಯ ಮೂಲಕ ಸಂಘದ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಅವರ ಸೇವಾವಧಿಯಲ್ಲಿ ಆಶ್ರಮದ ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಪೂಜ್ಯರ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ ನಿರ್ಮಾಣವಾಗಿದೆ.ಮೈಸೂರು ರಾಮಕೃಷ್ಣ ಆಶ್ರಮದ ನೂತನ ಅಧ್ಯಕ್ಷರಾಗಿ ಸ್ವಾಮಿ ಯುಕ್ತಶಾನಂದಜಿ ಮಹಾರಾಜ್ ಅಧಿಕಾರ ಸ್ವೀಕಾರ

ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರು ಶೀಘ್ರದಲ್ಲೇ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅವರ ದೀರ್ಘಕಾಲದ ಸೇವೆಯನ್ನು ಸ್ಮರಿಸಿದ ಭಕ್ತರು ಮತ್ತು ಹಿತೈಷಿಗಳು ಕೃತಜ್ಞತೆ ಸಲ್ಲಿಸಿ ಗೌರವಪೂರ್ವಕವಾಗಿ ಬೀಳ್ಕೊಟ್ಟರು.assumes jk02_new jk02 new

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸ್ವಾಮಿ ಯುಕ್ತೇಶಾನಂದ ಮಹಾರಾಜ್ ಅವರು ಸುಮಾರು 12 ವರ್ಷಗಳ ಕಾಲ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದು, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಆತ್ಮೀಯ ಸ್ವಾಗತ ಕೋರಿ, ಮುಂದಿನ ಸೇವಾಕಾರ್ಯಗಳಿಗೆ ಶುಭ ಹಾರೈಸಲಾಯಿತು.

 

English Summary
Title

Swami Yuktashanandaji Maharaj assumes charge as the new President of the Ramakrishna Ashrama, Mysuru.

Short Description
Swami Muktidanandaji Maharaj, who served as the President of the Sri Ramakrishna Ashrama in Mysuru for several years, handed over the responsibility of the Ashrama to Swami Yuktashanandaji Maharaj. Monks of the Ashrama, devotees, volunteers, and well-wishers were present at the ceremony held at the temple to mark the transfer of responsibility.
Keywords
Swami Yuktashanandaji Maharaj, assumes, charge, new President, Ramakrishna Ashrama, Mysuru.