ಬೆಂಗಳೂರು,ಅಕ್ಟೋಬರ್,23,2026 (www.justkannada.in): ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿಕೆ, ಮಾಧ್ಯಮದ ವ್ಯವಸ್ಥಾಪಕನಿಂದ ಈ ಸ್ಟಿಂಗ್ ಪ್ರಕರಣ ಆಗಿದೆ. ಸಿಎಂ ಡಿಕೆ ಶಿವಕುಮಾರ್ ಈ ಘಟನೆ ಹಗುರವಾಗಿ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಹೆಸರು ಹಾಳು ಮಾಡುವುದಕ್ಕೆ ಹೊರಟಿದ್ದರು ಎಂದು ಕಿಡಿಕಾರಿದರು.
ಪತ್ರಕರ್ತನಿಗೆ ತೋರಿಕೆಗೆ ಸಮನ್ಸ್ ಕೊಟ್ಟಿದ್ದಾರೆ ಅಷ್ಟೆ. ಆ ವ್ಯಕ್ತಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ತನಿಖಾಧಿಕಾರಿ ಅಜಯ್ ಹಿಲೋರಿ ಮೇಲೆ ಐಎಂಎ ಕೇಸ್ ಇತ್ತು ಎಂದು ಹೆಚ್ ಡಿಕೆ ಹೇಳಿದ್ದಾರೆ.







