Sunday, September 6, 2026

BDA Apartments

Home Front Page ಮದುವೆಯಾದ ಮರುದಿನವೇ ಹೃದಯಾಘಾತ : ನವವಿವಾಹಿತ ಸಾವು

ಮದುವೆಯಾದ ಮರುದಿನವೇ ಹೃದಯಾಘಾತ : ನವವಿವಾಹಿತ ಸಾವು

ಶಿವಮೊಗ್ಗ, ಡಿಸೆಂಬರ್,3,2025 (www.justkannada.in): ಮದುವೆಯಾದ ಮರುದಿನವೇ ಹೃದಯಾಘಾತದಿಂದ  ನವವಿವಾಹಿತ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿ ರಮೇಶ್(30) ಹೃದಯಾಘಾತದಿಂದ ಮೃತಪಟ್ಟ ನವವಿವಾಹಿತ. ಮದುವೆಯ ಬಳಿಕ ದೇವರ ದರ್ಶನ ಪಡೆಯಲು ತೆರಳಿದ ಸಂದರ್ಭದಲ್ಲಿ ಯುವಕ ರಮೇಶ್ ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ರಮೇಶ್ ಮೃತಪಟ್ಟಿದ್ದಾರೆ.

ಹನುಮಂತಪುರದ ನಿವಾಸಿ ರಮೇಶ್ ಒಂದು ವರ್ಷದ ಹಿಂದೆ ಬಂಡ್ರಿ ಗ್ರಾಮದ ಯುವತಿಯೊಂದಿಗೆ  ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನವೆಂಬರ್ 30ರಂದು ಶಿವಮೊಗ್ಗದ ಬಿ. ಹೆಚ್. ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಅವರ ಮದುವೆ ನೆರವೇರಿತ್ತು. ಮದುವೆಯ ನಂತರ ಡಿಸೆಂಬರ್ 1 ರಂದು ವಧುವಿನ ಮನೆಗೆ ತೆರಳಲು ದಂಪತಿಗಳು ಹರಪ್ಪನಹಳ್ಳಿಯ ಬಂಡ್ರಿಗೆ ಆಗಮಿಸಿದ್ದರು. ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ಬರಮಾಡಿಕೊಳ್ಳಲಾಗಿತ್ತು.

ಈ ನಡುವೆ ವಧುವಿನ ಮನೆ ತಲುಪಿದ ನಂತರ, ದಂಪತಿಗಳು ದೇವರ ಮನೆಯ ದರ್ಶನಕ್ಕೆ ತೆರಳಿದ್ದು  ಈ ವೇಳೆ ವರ ರಮೇಶ್ ಕೈಮುಗಿಯಲು ಬಾಗಿಲಿನತ್ತ ಸಾಗುತ್ತಿದ್ದಾಗ ಹೃದಯಾಘಾತವಾಗಿದೆ.   ಕುಸಿದು ಬಿದ್ದ ರಮೇಶ್ ರನ್ನು  ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲೇ ರಮೇಶ್  ಅವರು ಮೃತಪಟ್ಟಿದ್ದಾರೆ.

Key words: New married,  dies, heart attack, after, marriage