ಜನರು, ಬೆಂಬಲಿಗರು ಕಾರ್ಯಕರ್ತರೇ ನನ್ನ ಶಕ್ತಿ: ಕೃತಜ್ಞತೆ ಸಲ್ಲಿಸದಿದ್ರೆ ನಾನು ಮನುಷ್ಯನಾ..?- ಮಾಜಿ ಸಚಿವ ಡಿ.ಕೆ ಶಿವಕುಮಾರ್ ..

ನವದೆಹಲಿ,ಅ.24,2019(www.justkannada.in):   ಜನರು, ಬೆಂಬಲಿಗರು, ಕಾರ್ಯಕರ್ತರೇ ನನ್ನ ಶಕ್ತಿ.  ನಾನು ಜೈಲಿನಲ್ಲಿದ್ದಾಗ ನನ್ನ ಪರ ಹೋರಾಡಿದವರಿಗೆ ಕೃತಜ್ಞತೆ ಸಲ್ಲಿಸದಿದ್ದರೆ ನಾನು ಮನುಷ್ಯನಾ..? ಹೀಗಾಗಿ ನನ್ನ ಪರ ಹೋರಾಡಿದವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಇಂದು ಬೆಳಿಗ್ಗೆ ನನ್ನ ತಾಯಿ ಮತ್ತು ಪತ್ನಿಗೆ ಸಮನ್ಸ್ ವಿಚಾರ ಕುರಿತು ಕೋರ್ಟ್ ನಲ್ಲಿ ವಿಚಾರಣೆ ಇತ್ತು. ವಿಚಾರಣೆಯನ್ನ 30ಕ್ಕೆ ಕೋರ್ಟ್ ಮುಂದೂಡಿದೆ.  ಇಡಿ ಅಧಿಕಾರಿಗಳು ಸಮನ್ಸ್​ ಜಾರಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿಚಾರಣೆ ಮಾಡಿ ಎಂದು ನಾವು  ಮನವಿ ಮಾಡಿದ್ದೇವೆ. ನೋಡೋಣ ಏನು ಮಾಡ್ತಾರೆ. ಅವರು ಎಲ್ಲಿಯೇ ವಿಚಾರಣೆ ನಡೆಸಿದರೂ ಉತ್ತರ ಕೊಡಲು ನಾವು ಸಿದ್ದರಿದ್ದೇವೆ  ಎಂದು ಹೇಳಿದರು.

ನನಗಾಗಿ ನನ್ನ ಜನರು ರಸ್ತೆಗಳಿದು ಹೋರಾಟ ಮಾಡಿದ್ದಾರೆ. ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನನ್ನ ಹಿತೈಷಿಗಳು ಬೆಂಬಲಿಗರು ಎಲ್ಲರೂ ನನ್ನನ್ನ ದಿನನಿತ್ಯ ಬಂದು ಭೇಟಿಯಾಗುತ್ತಿದ್ದರು. ಎಲ್ಲಾ ಮಠದ ಸ್ವಾಮಿಗಳು ದೆಹಲಿಗೆ ಬಂದು ನನಗೆ ನೈತಿಕ ಬೆಂಬಲ ನೀಡಿದರು. ಅವರೆಲ್ಲರಗೆ ಪ್ರೀತಿ, ವಿಶ್ವಾಸ, ನಂಬಿಕೆ ನನಗೆ ಶಕ್ತಿ ಕೊಟ್ಟಿದೆ. ನನ್ನ ಪರ ವಕೀಲರು ವಾದ ಮಂಡಿಸಿದ್ದಾರೆ. ಹೀಗಾಗಿ ನನ್ನ ಪರ ಹೋರಾಟ ಮಾಡಿದವರಿಗೆ ಕೃತಜ್ಞನತೆ ಅರ್ಪಿಸುತ್ತೇನೆ ಎಂದರು.

ಇನ್ನು ಮೊದಲು ನಮ್ಮ ವಕೀಲರನ್ನ ಭೇಟಿಯಾಗುತ್ತೇನೆ. ನಂತರ ನಮ್ಮ ನಾಯಕರನ್ನ ಭೇಟಿಯಾಗಿ ಬಳಿಕ ಬೆಂಗಳೂರಿಗೆ ತೆರಳುತ್ತೇನೆ. ನಾನು ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಕಾನೂನಿಗೆ ಗೌರವ ಕೊಡುತ್ತೇನೆ.  ಇಡಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ಏನೇ ಪ್ರಶ್ನೆ ಕೇಳಿದರೂ ಉತ್ತರಿಸಲು ಸಿದ್ಧ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: New Delhi- DK Shivakumar- My strength – people- supporters – activists