ಮದುವೆ ಬಳಿಕ ಸಿನಿಮಾಗಾಗಿ ವರ್ಕೌಟ್ ಶುರು ಮಾಡಿದ ನಿಖಿಲ್

ಬೆಂಗಳೂರು, ಜೂನ್ 17, 2020 (www.justkannada.in): ಮದುವೆ ಬಳಿಕ ಮುಂದಿನ ಸಿನಿಮಾಗಾಗಿ ನಿಖಿಲ್ ಸಿದ್ಧತೆ ಆರಂಭಿಸಿದ್ದಾರೆ.

ಹೌದು. ಮುಂದಿನ ಸಿನಿಮಾಗಾಗಿ ಕಸರತ್ತು ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

ಮದುವೆ ಬಳಿಕ ಪತ್ನಿ ರೇವತಿ ಜತೆ ಕೊಡಗಿನಲ್ಲಿ ಸಮಯ ಕಳೆಯುತ್ತಿರುವ ಇದರ ಜತೆ ವರ್ಕೌಟ್ ಕೂಡ ಶುರು ಮಾಡಿದ್ದಾರೆ.

ಈ ವಿಡೀಯೋವೊಂದ‍ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.