Saturday, September 12, 2026

BDA Apartments

Home Front Page ಮೈಸೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ತ್ರಿವರ್ಣ ಧ್ವಜದೊಂದಿಗೆ ಹಾರಾಡಿದ ವಿಶ್ವಸಂಸ್ಥೆಯ ನೀಲಿ ಧ್ವಜ….

ಮೈಸೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ತ್ರಿವರ್ಣ ಧ್ವಜದೊಂದಿಗೆ ಹಾರಾಡಿದ ವಿಶ್ವಸಂಸ್ಥೆಯ ನೀಲಿ ಧ್ವಜ….

ಮೈಸೂರು,ಅ,24,2019(www.justkannada.in): ಇಂದು ವಿಶ್ವಸಂಸ್ಥೆ ದಿನಾಚಾರಣೆ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಟ್ಟಡ ಮೇಲ್ಭಾಗದಲ್ಲಿ  ತ್ರಿವರ್ಣ ಧ್ವಜದೊಂದಿಗೆ ವಿಶ್ವಸಂಸ್ಥೆಯ ನೀಲಿ ಧ್ವಜ ಹಾರಾಡಿತು.

ಮೈಸೂರಿನ ಪಾರಂಪರಿಕ ಕಟ್ಟಡ ಜಿಲ್ಲಾಧಿಕಾರಿ ಕಚೇರಿ ಮೇಲೆ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಆದೇಶದನ್ವಯ ವಿಶ್ವಸಂಸ್ಥೆ ಸ್ಥಾಪನಾ ದಿನದ ಸ್ಮರಣಾರ್ಥ ಇಂದು ಜಿಲ್ಲಾಧಿಕಾರಿ ಕಚೇರಿ ಮೇಲೆ ನೀಲಿ ಮತ್ತು ಬಿಳಿ ಬಣ್ಣದ ಲೋಗೋ ಧ್ವಜ ಹಾರಿಸಲಾಗಿದೆ.

ಧ್ವಜ ಸಂಹಿತೆ 2002 ರ ಪ್ರಕಾರ ರಾಷ್ಟ್ರ ಧ್ವಜದ ಆರೋಹಣದೊಂದಿಗೆ ವಿಶ್ವಸಂಸ್ಥೆಯ ಧ್ವಜವನ್ನು ಹಾರಾಡುವ ಹಾಗೆ ‌ಮತ್ತು ಕಾಣುವ ಹಾಗೆ ರಾಷ್ಟ್ರ ಧ್ವಜದ ಬಲಭಾಗದಲ್ಲಿ ಹಾರಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

Key words: United Nations -Blue flag – Mysore -District Office