Monday, September 21, 2026

BDA Apartments

40% ಕಮಿಷನ್ ಆರೋಪದಲ್ಲಿ ಪ್ರಧಾನಿ ಕಚೇರಿಯಿಂದ ತನಿಖೆ ವಿಚಾರ: ದಿನೇಶ್ ಗುಂಡೂರಾವ...
Home Front Page 40% ಕಮಿಷನ್ ಆರೋಪದಲ್ಲಿ ಪ್ರಧಾನಿ ಕಚೇರಿಯಿಂದ ತನಿಖೆ ವಿಚಾರ: ದಿನೇಶ್ ಗುಂಡೂರಾವ್ ವ್ಯಂಗ್ಯ.

40% ಕಮಿಷನ್ ಆರೋಪದಲ್ಲಿ ಪ್ರಧಾನಿ ಕಚೇರಿಯಿಂದ ತನಿಖೆ ವಿಚಾರ: ದಿನೇಶ್ ಗುಂಡೂರಾವ್ ವ್ಯಂಗ್ಯ.

ಬೆಂಗಳೂರು,ಜೂನ್,28,2022(www.justkannada.in):  40% ಕಮಿಷನ್ ಆರೋಪದ ಮೇಲೆ ಕೆಂಪಣ್ಣ ನೀಡಿದ್ಧ ದೂರಿಗೆ ಸ್ಪಂದಿಸಿ ದಾಖಲೆ ನೀಡುವಂತೆ ಪ್ರಧಾನಿ ಕಚೇರಿಯಿಂದ ಸೂಚನೆ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ತಂಡವನ್ನ ಸುಮ್ಮನೆ ಕಳಿಸ್ತಾರೆ ಅಷ್ಟೆ ಕ್ರಮ ಕೈಗೊಳ್ಳಲ್ಲ.  ಪತ್ರ ಬರೆದಿದ್ದಕ್ಕೆ  ಟೀಮ್ ಕಳುಹಿಸುತ್ತಾರೆ ಎಂಬುದನ್ನೆಲ್ಲಾ ನಾವು ಒಪ್ಪಬೇಕಾ..? ಒಂದು ವರ್ಷದಿಂದ ಆರೋಪ ಮಾಡಿ ದಾಖಲೆ ಕೊಟ್ಟಿದ್ದರು.  ಆದರೆ ಈಗ ಜನರಿಗೆ ತೋರಿಸೋದಕ್ಕೆ ಹೀಗೆ ಮಾಡಿದ್ದಾರೆ  ಅಷ್ಟೆ ಎಂದು ಲೇವಡಿ ಮಾಡಿದರು.covid-vaccine-cm-campaign-minister-statement-congress-leader-dinesh-gundurao

ನಿಜವಾಗಿ ಕ್ರಮಕೈಗೊಳ್ಳುವುದಾದರೇ ಕೆಂಪಣ್ಣ ದೂರು ಕೊಟ್ಟವರ ಮೇಲೆ ರೇಡ್ ಮಾಡಲಿ. ಐಟಿ, ಇಡಿಯವರನ್ನ ಕಳುಹಿಸಿ ದಾಳಿ ಮಾಡಿಸಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

Key words: 40% commission-alleges-investigation – Prime Minister’s-Office-Dinesh Gundurao.