ಮೈಸೂರು-ಬೆಂಗಳೂರು ಹೆದ್ದಾರಿ ಕ್ರೆಡಿಟ್ ವಾರ್: ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್.

 ಮಂಡ್ಯ,ಜೂನ್,28,2022(www.justkannada.in): ಮೈಸೂರು-ಬೆಂಗಳೂರು ಹೆದ್ದಾರಿ ಕ್ರೆಡಿಟ್ ವಾರ್  ಮುಂದುವರೆದಿದ್ದು ಈ ಕುರಿತು ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹಗೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷ ಟಾಂಗ್ ನೀಡಿದ್ದಾರೆ.

ಅವರು ಕೆಲಸ ಮಾಡಿಸ್ತಿದ್ದಾರೆ ಬೇಜಾರಿಲ್ಲ.  ನನಗೆ ಯಾರ ಮೇಲೂ ಕೋಲ್ಡ್ ವಾರ್ ಇಲ್ಲ. ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯ ಇಲ್ಲ. ನನ್ನಿಂದ ಯಾವುದೇ ಕಾಮಗಾರಿ ವಿಳಂಬವಾಗಿಲ್ಲ. ಫೋಟೊ ತೆಗೆದುಕೊಂಡು ಮೀಡಿಯಾ ಮುಂದೆ ಬರಲು ಆಗಲ್ಲ. ಮಿಡಿಯಾ ಮುಂದೆ ಬಂದು ಕುಳಿತರೇ ಕೆಲಸ ಆಗಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಸಂಸದೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ಕುಟುಕಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗಲ್ಲ. ನನಗೆ ರಾಜಕೀಯ ಅನಿವಾರ್ಯ ಇಲ್ಲ. ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ.  ಮಂಡ್ಯ ಜನರ ಋಣ ತೀರಿಸಲು ರಾಜಕೀಯಕ್ಕೆ ಬಂದಿದ್ದೇನೆ. ನಾನು ಮಂಡ್ಯ ಬಿಡಲ್ಲ . ಕೆಲವರು ನಾನು ಮಂಡ್ಯ ಬಿಡೋ ಕನಸು ಕಾಣುತ್ತಿದ್ದಾರೆ.  ಅದು ನನಸಾಗಲ್ಲ. ನಾನು ಎಂದಿಗೂ ಮಂಡ್ಯದಲ್ಲೇ ಇರುತ್ತೇನೆ  ನನಗೆ ಅಧಿಕಾರದ ಆಸೆ ಇಲ್ಲ ಎಂದರು.

Key words: Mysore-Bangalore-Highway-Credit War-Sumalatha Ambarish – MP Pratap Simha

ENGLISH SUMMARY…

Mysuru-Bengaluru highway credit war: Sumalatha Ambareesh ridicules MP Pratap Simha
Mandya, June 28, 2022 (www.justkannada.in): The war of words between leaders on the widening of the Mysuru-Bengaluru highway has continued. Mandya MP Sumalatha Ambareesh has expressed her dissatisfaction against MP Pratap Simha.
“He is working on it, and I don’t have any objection to it. I don’t have any cold war with anyone. Also I don’t want to take credit for anything. No work has been delayed due to me. I can’t appear before the media along with pictures. It won’t work if you come and sit in front of the media,” she indirectly told MP Pratap Simha.
Speaking to the media persons today, she said, “I won’t leave Mandya and go anywhere. Politics is not inevitable for me. I am in politics only because of the people of Mandya. I am here only to give back to the people of Mandya. I won’t run away from here. But a few people are dreaming that I will leave Mandya. But I promise I will be here and I don’t have any greed for power.”
Keywords: Sumalatha Ambareesh/ MP Pratap Simha/ Mysuru-Bengaluru highway
—————————————————