ಬಿಜೆಪಿಯವರು ಆರ್ ಎಸ್ ಎಸ್ ಗೆ ಕಮಿಷನ್ ಕೊಡ್ತಾರೆ ಎಂದ ಹೆಚ್.ಡಿಕೆ ವಿರುದ‍್ಧ  ಸಚಿವ ಸೋಮಶೇಖರ್ ಗರಂ.

ದಾವಣಗೆರೆ,ಜೂನ್,28,2022(www.justkannada.in): ಬಿಜೆಪಿಯವರು ಆರ್ ಎಸ್ ಎಸ್ ಗೆ ಕಮಿಷನ್ ಕೊಡ್ತಾರೆ ಎಂದು ಹೇಳಿಕೆ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ‍್ಧ  ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದರು.

ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಹೆಚ್.ಡಿ  ಕುಮಾರಸ್ವಾಮಿ ಅವರು ಸಿಎಂ ಆಗಿದ್ದವರು.  ಮಾತಾಡುವಾಗ ಘನತೆಯಿಂದ ಮಾತನಾಡಲಿ. ಆರ್ ಎಸ್ ಎಸ್ ಗೆ ಕಮಿಷನ್ ಕೊಡ್ತಿದೆ ಅಂತಾ ಹೇಳಿದ್ರೆ ಏನರ್ಥ..? ಆರ್ ಎಸ್ ಎಸ್ ಒಂದು ದೇಶಭಕ್ತಿ ಸಂಘಟನೆ. ನಾವೇಕೆ ಆರ್ ಎಸ್ ಎಸ್ ಗೆ  ಕಮಿಷನ್ ಕೊಡಬೇಕು. ಹೆಚ್.ಡಿಕೆಗೆ  ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಹೀಗಾಗಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Key words: Minister- ST Somashekhar- HDK-BJP -commission – RSS.