ಪ್ರೊ.ಜಿ.ಹೇಮಂತ್ ಕುಮಾರ್ ನಗುಮೊಗದ ದಕ್ಷ‌ ಆಡಳಿಗಾರ: ಟಿ.ಎಸ್.ನಾಗಾಭರಣ.

ಮೈಸೂರು,ನವೆಂಬರ್,14,2022(www.justkannada.in):  ಪ್ರೊ.ಜಿ.ಹೇಮಂತ್ ಕುಮಾರ್ ನಗುಮೊಗದ ದಕ್ಷ‌ ಆಡಳಿಗಾರರು. ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ನಗರದ ಕ್ರಾಫರ್ಡ್ ಹಾಲ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕೇಂದ್ರೀಯ ಭಾಷಾ ಸಂಸ್ಥಾನದ ಕೆಲಸಕ್ಕೆ ನಾನು ಮೈಸೂರಿಗೆ ಬಂದಾಗ ಹೇಮಂತ್ ಕುಮಾರ್ ಪರಿಚಯ ಆಯಿತು. ನಾನು ತಲಕಾಡಿನವನು. ಮೈಸೂರಿಗೆ ಅದರದೆ ವಿಶಿಷ್ಟತೆ ಇದೆ. ಇದು ನನ್ನ ಊರು. ಇದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಮಂತ್ ಕುಮಾರ್ ಸದಾ ಯೋಚಿಸುತ್ತಾರೆ. ಮೈಸೂರಿನ ಬಗ್ಗೆ ಅವರಿಗೆ ಅಪಾರ ಪ್ರೀತಿ ಅಕ್ಕರೆ. ಮೈಸೂರು ವಿವಿಗೆ ಸಮರ್ಥ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆ ಕಟ್ಟಿಕೊಟ್ಟಿದ್ದಾರೆ. ತಮ್ಮ ನಗುಮೊಗ, ಸ್ನೇಹ ಹೃದಯ ಹಾಗೂ ಶಿಸ್ತಿನಿಂದಲೇ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ನುಡಿದರು.

ಯಾರಾದರೂ ಸಚಿವರ ಜೊತೆ ಓಡಾಡುತ್ತಿದ್ದರೆ ಅದು ವೈಯಕ್ತಿಕ ಕೆಲಸಕ್ಕೆ ಆಗಿರುವುದಿಲ್ಲ. ವಿವಿಗೆ ಬೇಕಾದ ಕೆಲಸ ಮಾಡುವ ಸಲುವಾಗಿ ಸದಾ ಬೆಂಗಳೂರಿಗೆ ಹೇಮಂತ್ ಕುಮಾರ್ ಓಡಾಡುತ್ತಿದ್ದರು. ವಿವಿಗೆ ಬೇಕಾದ ಎಲ್ಲಾ ಸಂಗತಿಗಳ ಬಗ್ಗೆ ಸದಾ ಯೋಚಿಸುತ್ತಿದ್ದರು. ಇಷ್ಟೆಲ್ಲಾ ಕೆಲಸ ಮಾಡಿದರೂ ಹೇಮಂತ್ ‌ಕುಮಾರ್ ಅವರಿಗೆ ಯಾವುದೆ ಹಮ್ಮುಬಿಮ್ಮುಗಳಿಲ್ಲ‌. ಅವರ ಕೆಲಸ ಹೀಗೆ ನಿರಂತರವಾಗಿರಲಿ ಎಂದು ಆಶಿಸಿದರು.

ಕೊರೊನಾ ಸಮಯದಲ್ಲಿ ಅವರು ಸಾಕಷ್ಟು ಕೆಲಸ ಮಾಡಿದರು. ಮೈಸೂರು ವಿವಿಗೆ ತನ್ನದೆ ಆದ ಪರಂಪರೆ ಇತ್ತು. ಅದಕ್ಕೆ ಎಲ್ಲೂ  ಧಕ್ಕೆ ಬರದಂತೆ ಕೆಲಸ ನಿರ್ವಹಿಸಿದ್ದಾರೆ. ನಿಜಕ್ಕೂ ಹೇಮಂತ ಕುಮಾರ್ ಅವರಯ ಇಡೀ ವಿವಿಯನ್ನು ಕುಟುಂಬದಂತೆ ನೋಡಿಕೊಂಡರು. ಮಾತೃ ಹೃದಯಿಯಂತೆ ಎಲ್ಲರನ್ನೂ ಸಲಹಿದರು. ಜೊತೆಗೆ ಅವರ ಜೀವನ ಬೆಂಕಿಯಲ್ಲಿ ಅರಳಿದ ಹೂವಿನಂತೆ. ನಮ್ಮಿಬ್ಬರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂದು ಹೇಳಿದರು.

ನಂತರ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, 30 ವರ್ಷ‌ ಮೀರಿದ ಸಂಬಂಧ ನನ್ನದು ಹಾಗೂ ಹೇಮಂತ್ ಕುಮಾರ್ ಅವರದು. ಒಂದೆರಡು ಮಾತುಗಳಲ್ಲಿ ಅದನ್ನು ಹೇಳಲು ಆಗುವುದಿಲ್ಲ. ನಿಕಟವರ್ತಿಯಾಗಿ ನಾವಿಬ್ಬರು ಕೆಲಸ ಮಾಡಿದ್ದೇವೆ. ಅಣ್ಣನಂತೆ ನನ್ನನ್ನು ಸಲಹಿದ್ದಾರೆ. ವಿದೇಶಕ್ಕೂ ಒಟ್ಟಿಗೆ ಹೋಗಿದ್ದೇವೆ. ಜೊತೆಗೆ ಕೆಲಸ ಮಾಡಿದ್ದೇವೆ. ಹೇಮಂತ ಕುಮಾರ್ ಒರ್ವ ದೈವ ಭಕ್ತ. ಕುಲಪತಿ ಆಗಿ ಕೆಲಸ ಮಾಡುವುದು ಕಷ್ಟ. ಒಳ್ಳೆಯ ಕೆಲಸ ಮಾಡುವುದೇ ಕಷ್ಟವಾಗಿದೆ. ಬರುವ ಪೈಲ್ ಗೆ ಸುಮ್ಮನೆ ಸಹಿ ಮಾಡಿದರೆ ನಾವು ಒಳ್ಳೆಯವರು ಎಂದರು.

ವಿಜ್ಞಾನ ತಂತ್ರಜ್ಞಾನ ಇದ್ದರೆ ಈ ದೇಶ ಹಾಗೂ ಜಗತ್ತು. ಆದರೆ, ಯಾರೂ ಕೂಡ ಇದಕ್ಕೆ ಒತ್ತು ನೀಡುತ್ತಿಲ್ಲ. ವಿಜ್ಞಾನ ಕ್ಕೆ ಪೋತ್ಸಾಹ ನೀಡುವ ಕುಲಪತಿಗಳು ಇಂದು ಬೇಕಿದೆ. ಆದರಿಂದು ಕುಲಪತಿಗಳು ಕೆಲಸ ಮಾಡಲು ಬಿಡದೆ ತೊಂದರೆ ಕೊಡುವವರೆ ಹೆಚ್ಚಾಗಿದ್ದಾರೆ. ಇಂತವರು ವಿವಿಗೆ ಬರಬಾರದು. ಸ್ವಾರ್ಥ ಸಾಧನೆ ಇಟ್ಟುಕೊಂಡು ಯಾರೂ ಕೂಡ ವಿವಿಗೆ ಬರಬಾರದು. ಹೇಮಂತ ಕುಮಾರ್ ಕುಲಪತಿಗಳಾಗಿ ತಮ್ಮದೆ ಆದ ಕೆಲಸ‌ ಮಾಡಿದ್ದಾರೆ. ರಂಗಪ್ಪ ಹೇಳಿದರೆ ಹೇಮಂತ ಕುಮಾರ್ ಸಹಿ ಮಾಡುತ್ತಾರೆ ಎಂಬುದೆಲ್ಲಾ ಸುಳ್ಳು. ಅವರ ಆಡಳಿತಾತ್ಮಕ ಕೆಲಸಕ್ಕೆ ನಾನೆಂದು ಅಡ್ಡಿಪಡಿಸಿಲ್ಲ. ಇದು ಎಲ್ಲಾ ಕುಲಪತಿಗಳ ಮೇಲೆ ಇಂತಹ ಆರೋಪ ಸಹಜ ಎಂದರು.

ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಎನ್.ಎಸ್.ರಾಮೇಗೌಡ, ಪ್ರೊ.ಆರ್.ನಿರಂಜನ ಸೇರಿದಂತೆ ಇತರರು ಇದ್ದರು.

Key words: Mysore University-VC- felicitation- ceremony-TS Nagabarana

 

ENGLISH SUMMARY : 

Prof. G. Hemanth Kumar is an efficient administrator with a smiling face: T.S. Nagabharana

Mysuru, November 14, 2022 (www.justkannada.in): “Prof. G. Hemanth Kumar is an efficient administrator with a smiling face. Both of us are good friends,” observed T.S. Nagabharana, former Chairman of the Kannada Development Authority.

He participated in a felicitation program organized for Prof. G. Hemanth Kumar, held at the Crawford Hall, in the University of Mysore today. In his address, he said, “I met Prof. G. Hemanth Kumar when I had come to Mysuru on some work related to the Central Institute of International languages. I am from Talakadu. Mysuru has its own specialty. It is my place too. Prof. Hemanth Kumar always think about preserving and development of Mysuru. Mysuru has a special place in his heart. He has given an efficient administration and educational system here. He manages everything so well with his smiling face and friendly attitude and discipline.”

“If anyone is seen with a Minister, it will usually not be regarding their personal work. Prof. Hemanth Kumar keeps visiting Bengaluru often for the works related to the University. He always thinks about the University and its works. Despite working so much and achievements he is so humble. I wish the University and the State gets many more years of his service and guidance,” he added.

“During the pandemic time he worked a lot. The University of Mysore has its own heritage. He has maintained the dignity throughout his service here. He really looks after the University as his family. He looks at everyone with a mother’s heart. However, his life is like a flower that blossomed amidst fire. We both have a close relationship,” he said.
In his address, Prof. K.S. Rangappa, former Vice-Chancellor, University of Mysore said, “My friendship with Prof. G. Hemanth Kumar is over 30 years. I cannot express it in just a few words. We have worked together. He has guided me like his brother. We have travelled overseas together and share many things,” he observed. “Nowadays doing good work has become very difficult. If we don’t question anything and sign all the files, we will be considered good,” he said on a lighter note.

Suttur Math Seer Sri Shivarathri Deshikendra Mahaswamiji, Prof. S.N. Hegde, Prof. N.S. Ramegowda, Prof. R. Niranjan and others were present.