ಬಡವರಿಗೆ ಆಶ್ರಯ ಮನೆ ವಿಚಾರ: ಶಾಸಕ ರಾಮದಾಸ್ ರಿಂದ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ- ಮಾಜಿ ಶಾಸಕ  ಎಂ ಕೆ ಸೋಮಶೇಖರ್ ಕಿಡಿ..

ಮೈಸೂರು,ನವೆಂಬರ್,24,2020(www.justkannada.in): ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್.ಎ.ರಾಮದಾಸ್ ರವರು ಬಡವರಿಗೆ ಆಶ್ರಯ ಮನೆ ನೀಡುತ್ತೇನೆಂದು ಪ್ರಚಾರ ನೀಡುತ್ತಿರುವುದು ದೊಡ್ಡ ಸುಳ್ಳು ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಕಿಡಿಕಾರಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ ಸೋಮಶೇಖರ್, ಕೆ ಆರ್ ಕ್ಷೇತ್ರದ ಈಗಿನ ಶಾಸಕರು ಯಾವುದೇ ಮನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿಲ್ಲ. ನನ್ನ ಅಧಿಕಾರವದಿಯಲ್ಲಿ ಕಾಂಗ್ರೆಸ್ ಸರ್ಕಾರದ ಅನುಮತಿ ಪಡೆದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 13.05 ಎಕರೆ ಜಮೀನನ್ನು ಹಣ ಪಾವತಿಸಿ ನಗರಪಾಲಿಕೆಗೆ ಹಸ್ತಾಂತರಿಸಿದ್ದೇನೆ.I didn't knew CM BSY will think so cheaply - KPCC President D.K. Shivakumar

ಸದರಿ ಜಮೀನನಲ್ಲಿ ಜಿ +2 ಮಾದರಿಯಲ್ಲಿ 1440 ಮನೆಗಳು ಹಾಗೂ ಗೂರೂರಿನಲ್ಲಿ ಜಿ +2 ಮಾದರಿಯಲ್ಲಿ 1644 ಮನೆಗಳನ್ನು ಕಟ್ಟುವುದಕ್ಕೆ ಎಲ್ಲಾ ಅನುಮತಿ ಪಡೆದು ಆಶ್ರಯ ಸಮಿತಿಯಿಂದ ಫಲಾನುಭವಿಗಳನ್ನು ಗುರುತಿಸಿ ಹಂಚಿಕೆಯಾಗಿ ಜಿಲ್ಲಾಧಿಕಾರಿಗಳ ಖಾತೆಗೆ 18 ಕೋಟಿ ರೂ ಜಮೆ ಆಗಿದೆ. ಇವರು ಅದೇ ಯೋಜನೆಯನ್ನು ಜಿ +11 , ಕಟ್ಟುತ್ತೇವೆಂದು ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ ಆ ಯೋಜನೆಯನ್ನು ಮುಖ್ಯ ಕಾರ್ಯದರ್ಶಿಯವರು ಮತ್ತು ವಸತಿ ಸಚಿವರಾದ ವಿ.ಸೋಮಣ್ಣನವರು ಕೂಡ ಇದನ್ನು ರದ್ದು ಮಾಡಿದ್ದಾರೆ. ಮನೆಗಳಿಗೆ ಯಾವುದೇ ಅನುಮತಿ ಬಾರದೆ ಇದ್ದರೂ ಜನಗಳಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.mysore-shelter-poor-mla-sa-ramadas-former-mla-mk-somashekhar

WWW.krashraya.com ಎಂದು ವೆಬ್ ಸೈಟ್ ಮಾಡಿ ಇದರಲ್ಲಿ ಸಾರ್ವಜನಿಕರು online ನಲ್ಲಿ ಅರ್ಜಿ ಸಲ್ಲಿಸಿ ಎಂದು ತಿಳಿಸಿದ್ದಾರೆ.  ಇದು ಸರ್ಕಾರದ ವೈಬ್‌ಸೈಟ್ ಅಲ್ಲ. ಈಗಾಗಲೇ ನಗರಪಾಲಿಕೆಯಲ್ಲಿ ಸರ್ಕಾರದ ವೈಬ್‌ಸೈಟ್ ಇದ್ದು ಅದರಲ್ಲಿ ಮನೆ ಇಲ್ಲದ 6200 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಆ ವೈಬ್‌ಸೈಟನ್ನು ಬಿಟ್ಟು ಇವರ ಸ್ವಂತ ವೈಬ್‌ಸೈಟ್‌ ಗೆ ಅರ್ಜಿ ಸಲ್ಲಿಸಿ ಎಂದು ಹೇಳುವ ಮೂಲಕ ಶಾಸಕ ರಾಮದಾಸ್ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆರೋಪಿಸಿದರು.

Key words: mysore- Shelter – poor-MLA- SA Ramadas-. Former MLA -MK Somashekhar