ಮೈಸೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ  ಎಸ್.ಪಿ ರಿಷ್ಯಂತ್ ಗೆ ಸಚಿವ ಎಸ್.ಟಿ ಸೋಮಶೇಖರ್ ತಾಕೀತು…

ಮೈಸೂರು,ನವೆಂಬರ್,24,2020(www.justkannada.in) ಇತ್ತೀಚೆಗೆ ಎಚ್ ಡಿ ಕೋಟೆಯ ರೆಸಾರ್ಟ್ ವೊಂದರಲ್ಲಿ ನಡೆದ ಕಳ್ಳತನ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಗೆ ತಾಕೀತು ಮಾಡಿದ್ದಾರೆ.

ಹೆಚ್.ಡಿ ಕೋಟೆ ಬಳಿಯ ರೆಸಾರ್ಟ್ ವೊಂದರ ಓನರ್ ಗೆ ಕಿರುಕುಳ ಆರೋಪ ಹಿನ್ನೆಲೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪ್ರಕರಣ ಕುರಿತು ಸಚಿವ ಎಸ್ ಟಿ ಸೋಮಶೇಖರ್ ಎಸ್ ಪಿ ರಿಷ್ಯಂತ್ ಅವರಿಗೆ ತಾಕೀತು ಮಾಡಿದರು.

ನಾನೇ ಪೋನ್ ಮಾಡಿ‌ ಇನ್ಸ್ ಪೆಕ್ಟರ್ ಗೆ ಹೇಳಿದ್ರೂ ಅಲ್ಲಿ ರೆಸಾರ್ಟ್ ಓನರ್ ರಾತ್ರಿ 10 ಗಂಟೆಯಾದರೂ ಆಚೆ ಬಿಟ್ಟಿಲ್ಲ. ತಪ್ಪು ಮಾಡದೇ ಇದ್ರೂ ಓನರ್ ಗೆ  ಥ್ರೆಟ್ ಮಾಡ್ತಾರೆ. ಆಯುಧಪೂಜೆಲಿ ರೋಲ್ ಕಾಲ್ ನೀಡಿಲ್ಲ ಅಂತ ಹೇಳಿ  10 ಗಂಟೆಯಾದರೂ ಅವರಿಗೆ ಕಿರುಕುಳ ನೀಡ್ತಾರೆ. ಕಳೆದ 8 ತಿಂಗಳನಿಂದ ರೆಸಾರ್ಟ್ ನಲ್ಲಿ ಯಾವುದೇ ಬಿಸಿನೆಸ್ ಇಲ್ಲ. ಹೀಗಿರುವಾಗ ಈ ರೀತಿ ಅವರಿಗೆ ತೊಂದರೆ ಕೊಟ್ಟರೆ ಹೇಗೆ.? ನಿಮಗೆ ಒಳ್ಳೆ ಹೆಸರಿದೆ. ಹಾಗಾಗಿ ನಿಮಗೆ ಹೇಳುತ್ತಿದ್ದೇನೆ. ಸರ್ಕಲ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಿ. ಮುಂದೆ ಹೀಗೆ ಆಗದ ಹಾಗೇ ನೋಡಿಕೊಳ್ಳಿ ಎಂದು  ಕೆಡಿಪಿ ಸಭೆಯಲ್ಲಿ ಎಸ್ ಪಿ ರಿಷ್ಯಂತ್ ಅವರಿಗೆ ಸೂಚಿಸಿದರು.Mysore District- KDP -meeting – Minister- ST Somashekhar-Officers -representatives

ಮೈಸೂರಿನಲ್ಲಿ ಕೊರೋನಾ ಕಡಿಮೆಯಾಗುತ್ತಿರೋ ಹಿನ್ನಲೆ, ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್,  ಕಳೆದ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕರೋನ ಹೆಚ್ಚಾಗುತ್ತಲೇ ಇತ್ತು. ಎಲ್ಲಿ ಹೋದ್ರೂ ಮೈಸೂರಿನ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಬೆಂಗಳೂರಿನ ನಂತರ ಸ್ಥಾನದಲ್ಲಿ ಮೈಸೂರು ಇತ್ತು. ಈಗ ಮೈಸೂರಿನಲ್ಲಿ ಕೊರೋನಾ ಕಂಟ್ರೋಲ್‌ ಗೆ ಬಂದಿದೆ. ಇದೇ ರೀತಿ ಕೆಲಸ ಕಾರ್ಯಗಳನ್ನ ಮುಂದುವರೆಸಿ. ಮತ್ತಷ್ಟು ಕ್ರಮಕೈಗೊಳ್ಳಿ. ಇಲಾಖೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನ ಸುಧಾಕರ್ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

Key words: Minister ST Somashekhar – mysore- SP Rishyant – KDP- meeting.