Wednesday, August 19, 2026

BDA Apartments

Home Front Page ರೆಬಲ್ ಸ್ಟಾರ್ ಅಂಬರೀಶ್ ಸ್ಮರಣೆಯಲ್ಲೂ ಸಂಸದೆ ಸುಮಲತಾಗೆ ಪ್ರತಾಪ್ ಸಿಂಹ ಪರೋಕ್ಷ ಟಾಂಗ್…

ರೆಬಲ್ ಸ್ಟಾರ್ ಅಂಬರೀಶ್ ಸ್ಮರಣೆಯಲ್ಲೂ ಸಂಸದೆ ಸುಮಲತಾಗೆ ಪ್ರತಾಪ್ ಸಿಂಹ ಪರೋಕ್ಷ ಟಾಂಗ್…

ಮೈಸೂರು,ನವೆಂಬರ್,24,2020(www.justkannada.in):  ಇಂದು ದಿ.ರೆಬೆಲ್ ಸ್ಟಾರ್ ಅಂಬರೀಶ್ ಅವರ 2ನೇ ಪುಣ್ಯಸ್ಮರಣೆಯ ದಿನವಾಗಿದ್ದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಸಾಲತಾಣದಲ್ಲಿ ಅಂಬಿ ಅವರ ಜತೆಗಿದ್ದ ಫೋಟೊವನ್ನ ಹಂಚಿಕೊಂಡು ಸ್ಮರಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ  ಸಾಮಾಜಿಕ ಜಾಲತಾಣದಲ್ಲಿ  ಫೋಟೊ  ಹಾಕಿ ದಿ. ಅಂಬಿ ಅವರನ್ನ ಸ್ಮರಿಸಿದ್ದು, ಸ್ಮರಣೆಯಲ್ಲೂ ಸಂಸದೆ ಸುಮಲತಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೂ, ಎಲ್ಲರೂ ಭಯಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಪ್ರೀತಿ, ಅಭಿಮಾನ ಗಳಿಸುವಂಥದ್ದಾಗಿತ್ತು ಅಂಬರೀಶಣ್ಣನ ವ್ಯಕ್ತಿತ್ವ.  ಎಂದು ಹೇಳುವ ಮೂಲಕ ಪರೋಕ್ಷ ಟಾಂಗ್ ನೀಡಿದ್ದಾರೆ.

ಸಾಮಾನ್ಯವಾಗಿ ಎಲ್ಲರಿಗೂ ಒಬ್ಬರೋ ಇಬ್ಬರೋ ಆಪ್ತರಿರುತ್ತಾರೆ. ಆದರೆ ನೂರಾರು ಜನ ಆಪ್ತ ಸ್ನೇಹಿತರಿದ್ದಿದ್ದು, ಭೇಟಿಯಾದವರಿಗೆಲ್ಲ ನನ್ನ ಆಪ್ತರು ಎಂಬ ಫೀಲಿಂಗ್ ಅಂಬರೀಶಣ್ಣನಲ್ಲಿ ಇತ್ತು.  ಶಾಶ್ವತವಾದ ನೆನಪಿನ ಬುತ್ತಿ ಕೊಡುತ್ತಿದ್ದಿದ್ದು ಅಂಬರೀಶಣ್ಣ ಮಾತ್ರ Miss you Anna ಎಂದು ಸಂಸದ ಪ್ರತಾಪ್ ಸಿಂಹ ಪೋಸ್ಟ್ ಹಾಕಿದ್ದಾರೆ.

ಇತ್ತೀಚೆಗೆ ಸಂಸದ ಪ್ರತಾಪ್ ಸಿಂಹ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ನಡುವೆ ಆರೋಪ ಪ್ರತ್ಯಾರೋಪ ನಡೆದಿತ್ತು. ತಾವು ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು  ಹೇಳಿಕೆ ನೀಡಿದ್ದ ಸಂಸದ ಪ್ರತಾಪ ಸಿಂಹಗೆ ಸಂಸದೆ ಸುಮಲತಾ ಅಂಬರೀಶ್‌  ತಿರುಗೇಟು ನೀಡಿದ್ದರು.mysore-mp-pratap-sinha-indirectly-mp-sumalatha-memory-rebel-star-ambarish

ಪ್ರತಾಪ್‌ ಸಿಂಹ ಒಬ್ಬ ಪೇಟೆ ರೌಡಿ ರೀತಿ ಮಾತಾಡೋದಾದರೆ, ನನ್ನ ಪ್ರತಿಕ್ರಿಯೆಗೆ ಅರ್ಹರಲ್ಲ. ಪಕ್ಕದ ಮೈಸೂರು ಕ್ಷೇತ್ರದ ಸಂಸದರಿಗೆ ನನ್ನ ಕ್ಷೇತ್ರದ ಬಗ್ಗೆ ಮಾತಾಡುವ ಹಕ್ಕಿಲ್ಲ. ಇವರ ಹೇಳಿಕೆಗೆ ಅಂಬರೀಶ್‌ ಅಭಿಮಾನಿಗಳು, ನನ್ನ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಗೊತ್ತಿದೆ ಎಂದಿದ್ದರು.

Key words: mysore MP-Pratap Sinha- indirectly- MP Sumalatha – memory – Rebel Star- Ambarish.