ಬೆಂಗಳೂರಿಗೆ ಹಿಂದಿರುಗಿದ 656 ಅನಿವಾಸಿ ಭಾರತೀಯರು

ಬೆಂಗಳೂರು, ಮೇ 23, 2020 (www.justkannada.in): ಜಕಾರ್ತ, ಕೌಲಾಲಂಪುರ್ ಸೇರಿದಂತೆ ವಿದೇಶದಿಂದ ಒಟ್ಟು 656 ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ಇಂದು ಬೆಳಗಿನಜಾವದವರೆಗೆ ಬೇರೆ ಬೇರೆ ವಿಮಾನಗಳ ಮೂಲಕ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಕಾರ್ತದಿಂದ 214, ಮಾಲೆಯಿಂದ 152, ದೋಹಾದಿಂದ 182 ಹಾಗೂ ಕೌಲಾಲಂಪೂರ್ ನಿಂದ 108 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಇಂಡೋನೇಷ್ಯಾದ ಜರ್ಕಾತದಿಂದ ಇಂದು ಬೆಳಗಿನ ಜಾವ 1.40 ಗಂಟೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹನ್ನೆರಡನೆಯ ವಿಮಾನದಲ್ಲಿ 214 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.