Tuesday, September 22, 2026

BDA Apartments

ಮೈಸೂರಿನ ಎಲ್ಲಾ 58 ಪೊಲೀಸರ ಕೊರೋನಾ ವರದಿ ನೆಗೆಟಿವ್… BDA JK_Adv BDA Adv
Home Front Page ಮೈಸೂರಿನ ಎಲ್ಲಾ 58 ಪೊಲೀಸರ ಕೊರೋನಾ ವರದಿ ನೆಗೆಟಿವ್…

ಮೈಸೂರಿನ ಎಲ್ಲಾ 58 ಪೊಲೀಸರ ಕೊರೋನಾ ವರದಿ ನೆಗೆಟಿವ್…

ಮೈಸೂರು,ಜೂ,26,2020(www.justkannada.in):   ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲಾ 58 ಪೊಲೀಸರ ಕೋವಿಡ್ ಟೆಸ್ಟ್ ವರದಿ ಬಂದಿದ್ದು ಸದ್ಯ ಆತಂಕ ದೂರವಾಗಿದೆ.

ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲಾ 58 ಪೊಲೀಸರ ವರದಿ ನೆಗೆಟಿವ್ ಎಂದು ಬಂದಿದೆ. ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಎಸ್ ಪಿ ಸಿ ಬಿ ರಿಷ್ಯಂತ್, ಎಎಸ್ ಪಿ ಸ್ನೆಹ ಸೇರಿದಂತೆ ಎಲ್ಲರ  ವರದಿ ನೆಗಿಟಿವ್ ಆಗಿದೆ. ನಂಜನಗೂಡು ಗ್ರಾಮಾಂತ ಠಾಣೆ ಪೇದೆಗೆ ಸೋಂಕು ತಗಲಿತ್ತು. ಹೀಗಾಗಿ ಜಿಲ್ಲೆಯ  ಹಲವು ಪೋಲೀಸರು ಕ್ವಾರಂಟೈನ್ ಆಗಿದ್ದರು.mysore-police-report-negative-najnagudu-constable

ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿತ್ತು. ಸಂಪರ್ಕದಲ್ಲಿದ್ದ 58 ಪೊಲೀಸರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಇದೀಗ ವರದಿ ಬಂದಿದ್ದು  ಸದ್ಯ ಆತಂಕ ನಿವಾರಣೆಯಾಗಿದೆ ಎಂದು ಮೈಸೂರು ಎಸ್ ಪಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

Key words: Mysore -Police –Report- Negative-najnagudu-constable