ಕೊರೋನಾ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ- ಸಚಿವ ಸುಧಾಕರ್ ಟ್ವೀಟ್…

ಬೆಂಗಳೂರು,ಜೂ,26,2020(www.justkannada.in):  ಮಹಾಮಾರಿ ಕೊರೋನಾ ಅಬ್ಬರ ದೇಶದಲ್ಲಿ ದಿನೇ ದಿನೇ ಹೆಚ್ಚಾಗಿತ್ತಿದ್ದು, ಈ ನಡುವ ಕೊರೊನಾ ನಿರ್ವಹಣೆಯಲ್ಲಿ ಭಾರತದ 5 ದೊಡ್ಡ  ನಗರಗಳ ಪೈಕಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.bangalore-looks-exceptional-corona-minister-sudhakar

ಈ ಕುರಿತು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ. ಜೂನ್ 25 ರಂತೆ, ಭಾರತದ 5 ದೊಡ್ಡ ಜನಸಂಖ್ಯೆ ನಗರಗಳಲ್ಲಿ 192500 ಕೋವಿಡ್ ಪ್ರಕರಣಗಳು, 7417 ಸಾವು ಸಂಭವಿಸಿವೆ. 1798 ಪ್ರಕರಣಗಳು ಮತ್ತು 78 ಸಾವುಗಳೊಂದಿಗೆ ಬೆಂಗಳೂರಿನಲ್ಲಿ, ಒಟ್ಟು ಟಾಪ್ 5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ , ಕೇವಲ 0.9% ಮತ್ತು 1% ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.

Key words: Bangalore –looks-exceptional – corona –Minister- Sudhakar