Friday, September 18, 2026

BDA Apartments

ಸಾಲಕ್ಕಾಗಿ ಅಪ್ರಾಪ್ತ ಮಗಳನ್ನೇ ಅಡವಿಟ್ಟ ಪೋಷಕರು… BDA JK_Adv BDA Adv
Home Crime ಸಾಲಕ್ಕಾಗಿ ಅಪ್ರಾಪ್ತ ಮಗಳನ್ನೇ ಅಡವಿಟ್ಟ ಪೋಷಕರು….

ಸಾಲಕ್ಕಾಗಿ ಅಪ್ರಾಪ್ತ ಮಗಳನ್ನೇ ಅಡವಿಟ್ಟ ಪೋಷಕರು….

 

ಮೈಸೂರು, ಜೂ.13, 2019 : (www.justkannada.in news) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಾಕಿಂಗ್ ನ್ಯೂಸ್.
ಅಪ್ರಾಪ್ತ ಬಾಲಕಿಯನ್ನ ಸಾಲ ನೀಡಿದ ಮಹಿಳೆ, ವೇಶ್ಯಾವಟಿಕೆ ದಂದೆಗೆ ಇಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರು ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿರುವುದು. ಜೂನ್ 6 ರಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಮುಖ್ಯಸ್ಥರ ನೆರವಿನಿಂದ ನಗರದ ಠಾಣೆಯೊಂದರ ಪೊಲೀಸರು ಈ ಬಾಲಕಿಯನ್ನ ರಕ್ಷಿಸಿದ್ದಾರೆ.

ತನಿಖೆ ವೇಳೆ ಓರ್ವ ಉಪನ್ಯಾಸಕ ಸೇರಿ ನಾಲ್ವರು ಬಾಲಕಿಯನ್ನ ಲೈಂಗಿಕವಾಗಿ ಬಳಸಿದ ಮಾಹಿತಿ ಲಭ್ಯವಾಗಿದೆ. ಇದೀಗ ಬಾಲಕಿಯನ್ನ ವೇಶ್ಯಾವಟಿಕೆಗೆ ತಳ್ಳಿದ ಮನೆ ಮಾಲೀಕ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಒಬ್ಬನನ್ನು ಬಂಧಿಸಿರುವ ಪೊಲೀಸರು, ಉಳಿದ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮೀಟರ್ ಬಡ್ಡಿಯ ಬಲೆಗೆ ಸಿಲುಕಿದ ಪೋಷಕರು. ರೌಡಿಗಳ ಕಾಟಕ್ಕೆ ಹೆದರಿ ಅಪ್ರಾಪ್ತ ವಯಸ್ಸಿನ ಮಗಳನ್ನೇ ಸಾಲ ನೀಡಿದ ಮಹಿಳೆಗೆ ಅಡವಿಟ್ಟ ಸಂಗತಿ ತನಿಖೆಯಲ್ಲಿ ಬಯಲಿಗೆ ಬಂದಿದೆ.

mysore-police-posco-case-odanadi