Friday, September 18, 2026

BDA Apartments

Home Front Page ಸಚಿವರ ಜಾಲಿ ರೈಡ್’ಗೂ ಎಸ್ಕಾರ್ಟ್ ! ಮಾಜಿ ಸಿಎಂ ತಿಂಡಿ ತಿನ್ನಲೂ ಹೋದ್ರೂ ‘ಬೆಂಗಾವಲು’ ವಾಹನ...

ಸಚಿವರ ಜಾಲಿ ರೈಡ್’ಗೂ ಎಸ್ಕಾರ್ಟ್ ! ಮಾಜಿ ಸಿಎಂ ತಿಂಡಿ ತಿನ್ನಲೂ ಹೋದ್ರೂ ‘ಬೆಂಗಾವಲು’ ವಾಹನ !

ಮೈಸೂರು, ಜೂನ್ 13, 2019 (www.justkannada.in): ಕೆ.ಆರ್.ನಗರದಲ್ಲಿ ಸಚಿವ ಸಾ.ರಾ.ಮಹೇಶ್ ಆಪ್ತನ ಹೊಸ ಬೈಕ್ ಓಡಿಸಿದ್ದಾರೆ. ಸಚಿವರ ಜಾವಾ ಜಾಲಿ ರೈಡ್’ಗೆ ಸಾಥ್ ಕೊಟ್ಟಿದ್ದು ಪೊಲೀಸರ ಎಸ್ಕಾರ್ಟ್ ವಾಹನ !

ಇನ್ನು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ತಿಂಡಿ ತಿನ್ನಲು ಮೈಸೂರು ರಿಫ್ರೆಷ್ಮೆಂಟ್ ಹೊರಟರೆ ಅವರಿಗೂ ಪೊಲೀಸರ ಎಸ್ಕಾರ್ಟ್ ವಾಹನವೇ ಸಾಥ್ ಕೊಟ್ಟಿದೆ!

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಬೆಂಗಾವಲು ವಾಹನ ಸಮೇತ ಜಾವ ಬೈಕ್ ಓಡಿಸಿದ್ದಾರೆ. ಅದೂ ಹೆಲ್ಮೆಟ್ ಇಲ್ಲದೇ! ಈ ವೀಡಿಯೋ ವೈರಲ್ ಆಗಿದೆ.

ಮೈಸೂರು ರಿಫ್ರೇಶ್ಮೆಂಟ್ ಹೋಟೆಲ್ ನಲ್ಲಿ ಸಿದ್ದರಾಮಯ್ಯ ತಿಂಡಿ ತಿಂದರು. ಆದರೆ ಇವರ ಜತೆಯಲ್ಲೇ ಎಸ್ಕಾರ್ಟ್ ವಾಹನ ಸಾಗಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರದ ಹೆಸರಲ್ಲಿ ಪೊಲೀಸರು ಕಿರಿಕಿರಿ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಯಿತು.

ಇಲ್ಲಿದೆ ನೋಡಿ ಆ ವೀಡಿಯೋ…