ಸಿಸಿಟಿವಿಯಲ್ಲಿ ರೆಕಾರ್ಡ್ ಆಯ್ತು ದಕ್ಷಿಣಕಾಶಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತ…

 

ಮೈಸೂರು, ಜೂ.13, 2019 : (www.justkannada.in news) ನಂಜನಗೂಡಿನಲ್ಲಿ ಭೀಕರ ರಸ್ತೆ ಅಪಘಾತವೊಂದು
ಸಿಸಿ ಕ್ಯಾಮರಾಮದಲ್ಲಿ ಸೆರೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 766ನಲ್ಲಿ ಅತಿವೇಗವಾಗಿ ಬಂದ ಕಾರೊಂದು, ಬೈಕ್ ಮತ್ತು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಪತ್ರಿಕಾ ಛಾಯಾಗ್ರಾಹಕ ಅನಂತಕೃಷ್ಣ ಸಿಂಗ್ ಗಂಭೀರ ಗಾಯಗೊಂಡರು.

ಅದೃಷ್ಠವಶಾತ್, ಪ್ರಾಣಾಪಾಯದಿಂದ ಬೈಕ್ ಸವಾರರ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

ನಂಜನಗೂಡು ಪಟ್ಟಣದ ಪೊಲೀಸ್ ವಸತಿಗೃಹ ಎದುರು ಇತ್ತೀಚೆಗೆ ನಡೆದಿದ್ದ ಘಟನೆ. ಈ ಘಟನೆಗೆ ಸಂಭಂಧಿಸಿದಂತೆ ಕೇರಳ ಮೂಲದ ವ್ಯಕ್ತಿ ಹಾಗೂ ಆತನ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.  ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋಗಾಗಿ ಇಲ್ಲಿ ನೋಡಿ…

key words : road-accident-nanjangudu-cctv-record-police