Sunday, August 2, 2026

BDA Apartments

Home Front Page ‘ರೆಬೆಲ್’ ರೋಷನ್ ಬೇಗ್ ಹಣಿಯಲು ಕೈ ನಾಯಕರ ‘ಹೈಕಮಾಂಡ್’ ತಂತ್ರ

‘ರೆಬೆಲ್’ ರೋಷನ್ ಬೇಗ್ ಹಣಿಯಲು ಕೈ ನಾಯಕರ ‘ಹೈಕಮಾಂಡ್’ ತಂತ್ರ

ಬೆಂಗಳೂರು,ಜೂನ್ 13, 2019 (www.justkannada.in): ಕೈ ನಾಯಕರ ವಿರುದ್ಧವೇ ಸಿಡಿದೆದ್ದಿರುವ ಮಾಜಿ ಸಚಿವ ರೋಷನ್ ಬೇಗ್ ಗೆ ಅವರ ಓಟಕ್ಕೆ ಹೈಕಮಾಂಡ್ ಮಟ್ಟದಲ್ಲಿ ಬ್ರೇಕ್ ಹಾಕಲು ರಾಜ್ಯದ ಕಾಂಗ್ರೆಸ್ ತೀರ್ಮಾನಿಸಿದ್ದಾರೆ.

ರಾಜ್ಯ ನಾಯಕರ ವಿರುದ್ಧ ಹೇಳಿಕೆ ನೀಡುತ್ತಿರುವ ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ಕೆಲವರು ದೂರು ನೀಡಿದ್ದಾರೆ.

ರಾಜ್ಯ ನಾಯಕರ ವಿರುದ್ಧ ನೀಡಿರುವ ಎಲ್ಲ ಹೇಳಿಕೆಗಳನ್ನು ಸಮಗ್ರವಾಗಿ ಒಟ್ಟುಗೂಡಿಸಿ ಹೈಕಮಾಂಡ್ ಅವರಿಗೆ ರಾಜ್ಯದ ಕಾಂಗ್ರೆಸ್ ನಾಯಕರು ರವಾನಿಸಿದ್ದಾರೆ. ಈ ಮೂಲಕ ಬೇಗ್ ಅವರ ವಿರುದ್ಧ ಕ್ರಮಕ್ಕೆ ತಯಾರಿ ನಡೆಸಿದ್ದಾರೆ.