Monday, November 2, 2026

Dasara Wishes

Happy Dasara
Home Front Page ಬೆಲೆ ಏರಿಕೆ: ನವದಂಪತಿಗಳಿಗೆ ಹಾಲು, ಮೊಸರು ಉಡುಗೊರೆ ನೀಡಿ ವಿನೂತನ ಜಾಗೃತಿ

ಬೆಲೆ ಏರಿಕೆ: ನವದಂಪತಿಗಳಿಗೆ ಹಾಲು, ಮೊಸರು ಉಡುಗೊರೆ ನೀಡಿ ವಿನೂತನ ಜಾಗೃತಿ

ಬೆಲೆ ಏರಿಕೆ: ನವದಂಪತಿಗಳಿಗೆ ಹಾಲು, ಮೊಸರು ಉಡುಗೊರೆ ನೀಡಿ ವಿನೂತನ ಜಾಗೃತಿ

ಮೈಸೂರು,ನವೆಂಬರ್,2,2026 (www.justkannada.in):  ರಾಜ್ಯದಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೋಳ ಜಗದೀಶ್ ಅವರು ನೂತನ ವಧು-ವರರಿಗೆ ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡಿ ಶುಭಾಶಯ ಕೋರಿದರು.

ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಡಕೋಳ ನಿವಾಸಿ ಮಂಜು ಹಾಗೂ ಅನನ್ಯ ಅವರ ವಿವಾಹ ಸಮಾರಂಭದಲ್ಲಿ ಈ ವಿನೂತನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮದುವೆಯ ಸಂಭ್ರಮದ ಸಂದರ್ಭದಲ್ಲಿ ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡುವ ಮೂಲಕ, ಇವು ಪ್ರತಿಯೊಂದು ಕುಟುಂಬದ ನಿತ್ಯದ ಅಗತ್ಯ ವಸ್ತುಗಳಾಗಿದ್ದು, ಅವುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ಸಂದೇಶವನ್ನು ವಿಭಿನ್ನವಾಗಿ ಸಾರಿದರು.ಬೆಲೆ ಏರಿಕೆ: ನವದಂಪತಿಗಳಿಗೆ ಹಾಲು, ಮೊಸರು ಉಡುಗೊರೆ ನೀಡಿ ವಿನೂತನ ಜಾಗೃತಿ

ಹಾಲು ಮತ್ತು ಮೊಸರು ಕೇವಲ ಆಹಾರ ಪದಾರ್ಥಗಳಲ್ಲ; ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಜನಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಡಕೋಳ ಜಗದೀಶ್ ಒತ್ತಾಯಿಸಿದರು.

ನವದಂಪತಿಗಳಾದ ಮಂಜು ಮತ್ತು ಅನನ್ಯ ಅವರಿಗೆ ಶುಭಹಾರೈಸುವುದರ ಜೊತೆಗೆ ಹಾಲು ಮತ್ತು ಮೊಸರಿನ ದರ ಏರಿಕೆಯ ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸಿದ ಈ ವಿನೂತನ ಪ್ರಯತ್ನ ಸಾರ್ವಜನಿಕರ ಗಮನ ಸೆಳೆಯಿತು.Price Hikes jk02_new jk02 new

ಇದೇ ಸಂದರ್ಭದಲ್ಲಿ ಯುವ ಮುಖಂಡ ಜೋಗಿ ಮಂಜು, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ದೂರ ರಾಜಣ್ಣ ಸೇರಿದಂತೆ ಹಲವು ಸ್ನೇಹಿತರು ಉಪಸ್ಥಿತರಿದ್ದು ನವದಂಪತಿಗಳಿಗೆ ಶುಭಕೋರಿದರು.

Price Hikes, Awareness Campaign, Through, Gifting, Milk and Curd,  Newlyweds, Mysore

English Summary
Title

Price Hikes: Unique Awareness Campaign Through Gifting Milk and Curd to Newlyweds

Short Description
In light of the increasing financial burden on poor and middle-class families due to the hike in milk and curd prices in the state, Kadakola Jagadish—president of the 'Pragnavanta Nagarika Vedike' (Conscious Citizens' Forum)—sought to draw public attention to the issue by gifting milk and curd to a newlywed couple. This unique awareness-raising initiative took place during the wedding ceremony of Manju and Ananya, both residents of Kadakola, held at the Sri Kalibireshwara Kalyana Mantapa in Kadakola.
Keywords
Price Hikes, Awareness Campaign, Through, Gifting, Milk and Curd, Newlyweds, Mysore