ಬೆಂಗಳೂರು,ನವೆಂಬರ್,2,2026 (www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಗೆ ಬಳಸಿದ್ದ ಮೊಬೈಲ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಿವಾಸದಲ್ಲಿ ಹಸ್ತಾಂತರವಾಗಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಆರೋಪವನ್ನು ತಳ್ಳಿ ಹಾಕಿರುವ ಹೆಚ್ ಡಿ ಕುಮಾರಸ್ವಾಮಿ ಅವರು ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠೀ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಸರ್ಕಾರದಲ್ಲಿ ರಾಜ್ಯೋತ್ಸವದ ಸುದ್ದಿ ಮುನ್ನಲೆಗೆ ಬಂದಿಲ್ಲ. ನಿನ್ನೆ ರಜಾದಿನವಾದರೂ ಸ್ಟಿಂಗ್ ವಿಚಾರವೇ ಸುದ್ದಿಯಲ್ಲಿದೆ. ನಿನ್ನೆ ನನ್ನ ವಿರುದ್ದ ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ ಸ್ಟಿಂಗ್ ಆಪರೇಷನ್ ನನಗೆ ತಿರುಗುಬಾಣವಾಗುತ್ತೆ ಎಂದು ಚರ್ಚೆಯಾಗುತ್ತಿದ. ದೆಹಲಿಯ ಆರೋಪಿ ರಿತೇಶ್ ಪಾಂಡೆಯನ್ನ ಅರೆಸ್ಟ್ ಮಾಡಿದ್ದು ಎಲ್ಲಿ? ನನ್ನ ನಿವಾಸದಲ್ಲಿ ಆರೋಪಿ ರಿತೇಶ್ ಪಾಂಡೆಯನ್ನ ಅರೆಸ್ಟ್ ಮಾಡಿದ್ದಾರಾ? ರಿತೇಶ್ ನನ್ನ ನಿವಾಸದಲ್ಲಿ ಇದ್ದನೆಂದು ಆರೋಪ ಮಾಡಿದ್ದಾರೆ. ಅರೆಸ್ಟ್ ಮಾಡಿ ಕರ್ಕೊಂಡು ಬಂದವನು ಎಲ್ಲಿದ್ದಾ? ತನಿಖಾ ತಂಡ ಅರೆಸ್ಟ್ ಮಾಡಿದ್ದು ಕುಮಾರಸ್ವಾಮಿ ಮನೆಯಲ್ಲಾ? ಪೊಲೀಸ್ ಕೇಸ್ ನಲ್ಲಿ ಅವರು ಕೊಟ್ಟ ಅಡ್ರೆಸ್ ಯಾವುದು? ಕುಮಾರಸ್ವಾಮಿ ಮನೆಯಲ್ಲಿದ್ದವನು ಅಂತಾ ಹೇಳಿದ್ದಾರೆ. ಆದರೆ ಅವನನ್ನು ಬಂಧಿಸಿದ್ದು ಗಾಜಿಯಾಬಾದ್ ನಲ್ಲಿ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ದ
ಸಿದ್ದರಾಮಯ್ಯರಿಗೆ ಕ್ಲೀನ್ ಚಿಟ್ ಕೊಡಲು ಈ ತನಿಖೆ ಅಲ್ಲವೇ? ವಿಡಿಯೋ ಮಾಡಿಸಿದವರನ್ನ ರಕ್ಷಣೆ ಮಾಡಲು ನಡೆಯುತ್ತರುವ ತನಿಖೆ. ನಿಮ್ಮ ತನಿಖೆ ಪ್ರಾಮಾಣಿಕವಾಗಿರಬೇಕು ಹಸ್ತಕ್ಷೇಪ ಇರಬಾರದು. ನಿಮ್ಮ ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ದವಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಕೃಪಾ ಆಳ್ವಾ, ಖಾಸಗಿ ಚಾಲನ್ ಮುಖ್ಯಸ್ಥ ಮತ್ತೊಬ್ಬರಿಂದ ಸ್ಟಿಂಗ್ ಆಪರೇಷನ್ ಆಗಿದೆ ಕೇರಳ ಹೆಣ್ಣು ಮಗಳನ್ನ ಕೂರಿಸಿ ವಿಡಿಯೋ ಮಾಡಿದ್ದಾರೆ. ಇವರನ್ನು ಏಕೆ ಪೊಲೀಸರು ತನಿಖೆ ಮಾಡಿಲ್ಲ? 2023 ರಲ್ಲಿ ಏಕೆ ಇದನ್ನು ವಿಡಿಯೋ ಮಾಡಿದ್ದಾರೆಂದು ತನಿಖೆ ಮಾಡಿದ್ದಾರಾ? ಎಂದು ಹೆಚ್ ಡಿಕೆ ಪ್ರಶ್ನಿಸಿದರು.
2011ರಲ್ಲಿ ನಡೆದ ಘಟನೆಗೆ ಕುಮಾರಸ್ವಾಮಿ ಕಾರಣ ಅಲ್ಲ. 2023ರಲ್ಲ ಚಿತ್ರೀಕರಣ ಮಾಡಿದರಲ್ಲ ಅದಕ್ಕೆ ಕುಮಾರಸ್ವಾಮಿ ಕಾರಣ ಅಲ್ಲ. 2023ರ ಚಿತ್ರೀಕರಣಕ್ಕೆ ಕೃಪ ಆಳ್ವಾ ರಾಜೇಶ್ ಶೆಟ್ಟಿ ಇಬ್ಬರೇ ಅಲ್ಲ. ಇಬ್ಬರೇ ಚಿತ್ರೀಕರಣ ಮಾಡಿಲ್ಲ ಇನ್ನೊಬ್ಬ ವಯಸ್ಸಾದ ವ್ಯಕ್ತಿ ಇದ್ದಾರೆ. ಕೃಪಾ ಆಳ್ವಾಗೂ ಹೆಣ್ಣು ಮಗಳಿಗೂ ಸಂಬಂಧ ಏನು? ಎಂದು ಹೆಚ್ ಡಿಕೆ ಪ್ರಶ್ನಿಸಿದರು.
Sting Operation, Ready, any investigation, Union Minister, HDK






