Sunday, September 20, 2026

BDA Apartments

ಮೈಸೂರಿನಲ್ಲಿ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪೊಲೀಸರಿಂದ ...
Home Front Page ಮೈಸೂರಿನಲ್ಲಿ ಹೆಲ್ಮೆಟ್ ಹಾಕದ  ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪೊಲೀಸರಿಂದ ಅರಿವು…

ಮೈಸೂರಿನಲ್ಲಿ ಹೆಲ್ಮೆಟ್ ಹಾಕದ  ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಪೊಲೀಸರಿಂದ ಅರಿವು…

ಮೈಸೂರು,ಫೆ,29,2020(www.justkannada.in): ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಮೈಸೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು, ಬೈಕ್​ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಹೆಲ್ಮೆಟ್​​ ಧರಿಸುವಂತೆ ಮನವಿ ಮಾಡಿದ್ದಾರೆ.

ಮೈಸೂರಿ‌ನ ಪಾಠ ಶಾಲಾ ಸಿಗ್ನಲ್ ಬಳಿ ಹೆಲ್ಮೆಟ್ ಬಗ್ಗೆ ಕೆ.ಆರ್.ಠಾಣೆ ಪೊಲೀಸರು ವಿನೂತನ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಎಎಸ್ ಐ ಗುರುಸ್ವಾಮಿ ಅವರು ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವ ಮೂಲಕ ಅರಿವು ಮೂಡಿಸಲು ಮುಂದಾದರು.

ಹೆಲ್ಮೆಟ್ ಹಾಕುವಂತೆ ಗುಲಾಬಿ ನೀಡಿ ಎಎಸ್‌ಐ ಗುರುಸ್ವಾಮಿ ಮನವಿ ಮಾಡಿದರು. ಎಎಸ್ ಐ ಗುರುಸ್ವಾಮಿ ಅವರಿಗೆ ಸಿಬ್ಬಂದಿಗಳಾದ ಶಿವಕುಮಾರ್, ಸಂತೋಷ ಸಾಥ್ ನೀಡಿದರು. ಗುರುಸ್ವಾಮಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Key words: Mysore- Police -give –redrose- helmet