Thursday, August 6, 2026

BDA Apartments

Home Front Page ನನ್ನ ಜನರ ಮುಂದೆ ಅವರ ದರ್ಪ ನಡೆಯಲ್ಲ: ಸಚಿವ ನಾರಾಯಣಗೌಡ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ...

ನನ್ನ ಜನರ ಮುಂದೆ ಅವರ ದರ್ಪ ನಡೆಯಲ್ಲ: ಸಚಿವ ನಾರಾಯಣಗೌಡ ವಿರುದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗು…

ಮಂಡ್ಯ,ಫೆ,29,2020(www.justkannnada.in): ಸಚಿವ ಕೆ.ಸಿ ನಾರಯಣಗೌಡರು ಮಹಾರಾಷ್ಟ್ರದಿಂದಲೇ  ಬಂದಿದ್ದಾರೆ. ಅವರಿಗೆ ದರ್ಪವಿದೆ. ಆದ್ರೆ ನನ್ನ ಜನರ ಮುಂದೆ ಅವರ ದರ್ಪ ನಡೆಯಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗಿದರು.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನ ಹರಳಹಳ್ಳೀಯ ಬಳಿಯ ಕ್ರಷರ್ ಗೆ ಭೇಟಿ ನೀಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು  ಪರಿಶೀಲಿಸಿದರು. ಈ ವೇಳೆ  ಜೆಡಿಎಸ್ ಕಾರ್ಯಕರ್ತರ ಸಮಸ್ಯೆಯನ್ನ ಹೆಚ್.ಡಿ ದೇವೇಗೌಡರು ಆಲಿಸಿದರು.  ಈ ವೇಳೆ ಕೋರ್ಟ್ ಆದೇಶವಿದ್ದರೂ ಕ್ರಷರ್ ಗೆ ಬೀಗ ಹಾಕಿಸಿದ್ದಾರೆ. ಈ ಮೂಲಕ ಸಚಿವ ಕೆ.ಸಿ ನಾರಾಯಣಗೌಡ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ದೂರು ಹೆಚ್.ಡಿ ದೇವೇಗೌಡರಿಗೆ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದರು.

ನಂತರ ಮಾತನಾಡಿದ ಹೆಚ್.ಡಿ ದೇವೇಗೌಡರು, ಸಿಎಂ ಬಿಎಸ್ ಯಡಿಯೂರಪ್ಪಗೆ 3 ವರ್ಷ ಸರ್ಕಾರ ಮಾಡಿ ಎಂದಿದ್ದೆ. ಆದರೆ ನಮ್ಮ ಕಾರ್ಯಕರ್ತರಿಗೆ ತೊಂದರೆಯಾದ್ರೆ ಸುಮ್ಮನಿರಲ್ಲ ಎಂದಿದ್ದೆ.  ಈಗ ಎಲ್ಲವನ್ನೂ ಬಿಎಸ್ ವೈಗೆ ಹೇಳಿದ್ದೇನೆ. ಸಿಎಂ ಕಾನೂನಿನ ಅಡಿ ನಡೆದುಕೊಳ್ಳಲಿ ಎಂದರು.

ನಮ್ಮ ಒಬ್ಬ ಕಾರ್ಯಕರ್ತನಿಗೆ ಏಟು ಬಿದ್ದರೂ ಹೋರಾಟ  ಕಾರ್ಯಕರ್ತರಿದ್ದರಷ್ಟೇ ನಾಯಕರು ಇರ್ತಾರೆ. ಕ್ರಷರ್ ವಿಚಾರದಲ್ಲಿ ನನ್ನ ಹೋರಾಟ ಬಿಡುವುದಿಲ್ಲ. ಈ ವಯಸ್ಸಿನಲ್ಲಿ ನನಗೆ ಕಾರ್ಯಕರ್ತರೇ ಮುಖ್ಯ. ನಾರಾಯಣಗೌಡ ಪಕ್ಷ ಬಿಟ್ಟು ಹೋದರು. ಆದರೆ ಕಾರ್ಯಕರ್ತರು ಹೋಗಲಿಲ್ಲ. ಹೀಗಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಚಿವ ನಾರಾಯಣಗೌಡ ಹೇಳಿದಂತೆ ಡಿಸಿ ಕೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: Former Prime Minister -HD Deve Gowda- against -Minister -Narayana Gowda-mandya