‘ಕೈ’ ಶಾಸಕ ನಾಗೇಂದ್ರರನ್ನ ಅದಷ್ಟು ಬೇಗ ಬಿಜೆಪಿಗೆ ಕರೆಸಿಕೊಳ್ಳುತ್ತೇವೆ-ಸಚಿವ ಕೆ.ಎಸ್ ಈಶ್ವರಪ್ಪ..

ಬಳ್ಳಾರಿ,ಫೆ,29,2020(www.justkannada.in): ಕಾಂಗ್ರೆಸ್ ಶಾಸಕ ನಾಗೇಂದ್ರ ಮೊದಲು ನಮ್ಮ ಪಕ್ಷದಲ್ಲೇ ಇದ್ದರು. ನಾಗೇಂದ್ರರನ್ನ ಆದಷ್ಟು ಬೇಗ ಬಿಜೆಪಿಗೆ ಕರೆಸಿಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು.

ಬಳ್ಳಾರಿಯಲ್ಲಿ  ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ವೇದಿಕೆಯಲ್ಲಿರುವ ಕಾಂಗ್ರಸ್ ಶಾಸಕ ನಾಗೇಂದ್ರ ಅವರು ನಮ್ಮ ಹೀರೋ, ಯಾಕೆ ಸಂಕೋಚ ಅವರು ನಮ್ಮ ಹೀರೋನೇ. ನಾಗೇಂದ್ರಗೆ ಒಂದು ಸಾರಿ ಎಲ್ಲರೂ ಚಪ್ಪಾಳೆ ಹೊಡಿಯಿರಿ. ಮೊದಲು ನಾಗೇಂದ್ರ ಅವರು ನಮ್ಮ ಜೊತೆ ಇದ್ದರು. ಇದೀಗ ಬೇರೆ ಕಡೆ ಇದ್ದಾರೆ. ಆದಷ್ಟು ಬೇಗ ಕರೆಸಿಕೊಳ್ತೀವಿ ಎಂದರು.

ಇದೇ ವೇಳೆ ಅಧಿವೇಶನ ನಡೆಯಲು ಬಿಡಲ್ಲ ಎಂದಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ಯಾವ ಲೆಕ್ಕದಲ್ಲಿ ಅಧಿವೇಶನ ನಡೆಯಲು ಬಿಡುವುದಿಲ್ಲ. ಸಿದ್ಧರಾಮಯ್ಯ ಯಾರೋ ಗೂಂಡಾ ಹೇಳಿದಂತೆ ಹೇಳೋದು ಸರಿಯಲ್ಲ.  ಈ ವಿಚಾರದಲ್ಲಿ ನಾನು ಎಚ್ಚರಿಕೆ ನೀಡಲು ಬಯಸಲ್ಲ. ೀ ಬಗ್ಗೆ ವಿಧಾನಸಭೆಯಲ್ಲಿ ಬೇಕಾದರೇ ಮಾತನಾಡಲಿ ಎಂದು ಸಲಹೆ ನೀಡಿದರು.

Key words: congress MLA- Nagendra- BJP –Minister- KS Eshwarappa.