Wednesday, September 9, 2026

BDA Apartments

Home Crime ಬೆಂಕಿ ಅವಘಡದಿಂದಾಗಿ ಗಂಭೀರ ಗಾಯಗೊಂಡಿದ್ದ ಮುಖ್ಯಪೇದೆ ಮತ್ತು ಪುತ್ರ ಇಬ್ಬರು ಚಿಕಿತ್ಸೆ ಫಲಿಸದೆ ಸಾವು…

ಬೆಂಕಿ ಅವಘಡದಿಂದಾಗಿ ಗಂಭೀರ ಗಾಯಗೊಂಡಿದ್ದ ಮುಖ್ಯಪೇದೆ ಮತ್ತು ಪುತ್ರ ಇಬ್ಬರು ಚಿಕಿತ್ಸೆ ಫಲಿಸದೆ ಸಾವು…

ಮೈಸೂರು,ಫೆ,14,2020(www.justkannada.in):  ಬೆಂಕಿ ಅವಘಡದಿಂದಾಗಿ  ಗಂಭೀರ ಗಾಯಗೊಂಡಿದ್ದ ಮುಖ್ಯಪೇದೆ ಹಾಗೂ ಪುತ್ರ ಇಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರಿನ ಸಿಎಆರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ ಹಾಗೂ ಪುತ್ರ ತೇಜಸ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್.ನಗರದ ಈಶ್ವರನಗರ ಬಡಾವಣೆಯಲ್ಲಿರುವ ಮುಖ್ಯ ಪೇದೆ ರೇಣುಕಾ ಸ್ವಾಮಿ ಅವರ ಮನೆಯಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿತ್ತು.  ಬೆಳಿಗ್ಗೆ ನೀರು ಒಲೆ ಹಚ್ಚುವ ವೇಳೆ ಅಗ್ನಿ ಅವಘಡ ಉಂಟಾಗಿತ್ತು.

ದುರಂತ ಘಟನೆಯಲ್ಲಿ ಒಂದೇ ಕುಟುಂಬದವರಾದ  ರೇಣುಕಾ ಸ್ವಾಮಿ(46)ಪತ್ನಿ ಪುಷ್ಪಲತಾ(35) ಹಾಗೂ ಪುತ್ರ ತೇಜಸ್(14) ಗೆ ಗಂಭೀರ ಗಾಯಗಳಾಗಿತ್ತು. ನಂತರ ಇವರಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ‌ ವಿಭಾಗದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೂವರು ಗಾಯಾಳುಗಳನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ತೇಜಸ್ ಸಾವೀಗಿಡಾಗಿದ್ದರು. ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ.

ರೇಣುಕಾಸ್ವಾಮಿ ಅವರ ಪತ್ನಿ ಪುಷ್ಪಲತಾಗೆ ಗಂಭೀರ ಸುಟ್ಟಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- KR nagar- police-son –fire-death