ಸಚಿವ ಆನಂದ್ ಸಿಂಗ್ ರಿಂದ ಸಿಎಂ ಬಿಎಸ್ ವೈ ಭೇಟಿ: ಅರಣ್ಯ ಖಾತೆ ಬದಲು ಬೇರೆ ಖಾತೆ ನೀಡುವಂತೆ ಮನವಿ..?

ಬೆಂಗಳೂರು,ಫೆ,14,2020(www.justkannada.in):  ಸಚಿವ ಆನಂದ್ ಸಿಂಗ್ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದು ತಮ್ಮ ಖಾತೆ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿರುವ ಅರಣ್ಯ ಸಚಿವ ಅನಂದ್ ಸಿಂಗ್ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ತಮಗೆ ನೀಡಿರುವ ಅರಣ್ಯ ಖಾತೆ ಬದಲು ಬೇರೆ ಖಾತೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಸದ್ಯಕ್ಕೆ ಅರಣ್ಯ ಖಾತೆಯನ್ನೇ ನಿರ್ವಹಿಸಿ ಎಂದು ಸಚಿವ ಆನಂದ್ ಸಿಂಗ್ ಗೆ ತಿಳಿಸಿದ್ದಾರೆ.  ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಮೊದಲು ಆನಂದ್ ಸಿಂಗ್ ಗೆ ಆಹಾರ ಖಾತೆ ನೀಡಿದ್ದರು. ನಂತರ  ಖಾತೆ ಹಂಚಿಕೆ ಮಾಡಿದ 24 ಗಂಟೆಗಳಲ್ಲೇ ಮತ್ತೆ ಖಾತೆ ಮರುಹಚಿಕೆ ಮಾಡಿ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ವಹಿಸಿದ್ದರು.

Key words: Minister -Anand Singh- Meet -CM BS Yeddyurappa- Request