ಮೂರನೇ ದಿನಕ್ಕೆ ಕಾಲಿಟ್ಟ ದಸರಾ ಸಂಭ್ರಮ: ಸಾಂಪ್ರದಾಯಿಕ ಉಡುಗೆ ತೊಟ್ಟು ಪಾರಂಪರಿಕ ನಡಿಗೆ…

ಮೈಸೂರು,ಅ,1,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ 3ನೇ ದಿನಕ್ಕೆ ಕಾಲಿಟ್ಟಿದ್ದು ,  ವಿದ್ಯಾರ್ಥಿಗಳು, ಮಧ್ಯವಯಸ್ಕರು ಹಾಗೂ ಹಿರಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು  ಪಾರಂಪರಿಕೆ ನಡಿಗೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು.

ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ  ಪಾರಂಪರಿಕ ನಡಿಗೆಗೆ ಹಸಿರು ನಿಶಾನೆ ತೋರುವ ಮೂಲಕ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್‌ ಚಾಲನೆ ನೀಡಿದರು. ನಗರದ ಟೌನ್‌ಹಾನ್‌ನಿಂದ ಆರಂಭವಾದ ಪಾರಂಪರಿಕ ನಡಿಗೆ ದೊಡ್ಡಗಡಿಯಾರ, ಅರಮನೆ, 10ನೇ ಚಾಮರಾಜ ಒಡೆಯರ್ ವೃತ್ತ, ಕೆ.ಆರ್.ವೃತ್ತ, ದೇವರಾಜ ಮಾರ್ಕೆಟ್, ಚಿಕ್ಕಗಡಿಯಾರ ಮಾರ್ಗವಾಗಿ ಸಾಗಿತು.

ಕರ್ನಾಟಕದ ಸಾಂಪ್ರದಾಯಿಕ ಉಡುಗೆ ಉಟ್ಟು  ಪಾರಂಪರಿಕ ಕಟ್ಟಡ ವೀಕ್ಷಣೆ ಮಾಡಲಾಯಿತು. ಮೇಯರ್ ಪುಷ್ಪಲತ, ಶಾಸಕ ನಾಗೇಂದ್ರ, ಪ್ರವಾಸಿಗರು ಹಾಗೂ ಸ್ಥಳಿಯರು ನೂರಾರು ವಿದ್ಯಾರ್ಥಿಗಳು ಪಾರಂಪರಿಕ ಉಡುಗೆ ತೊಟ್ಟು ಹೆಜ್ಜೆ ಹಾಕಿದರು.

Key words: mysore-dasara -2019 – third day- Students – traditional dress –  traditional walk.