ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರಿದ ಹಿರಿಯ ನಟ ಬ್ರಹ್ಮಾನಂದಂ ಹೆಸರು

ಬೆಂಗಳೂರು, ಆಗಸ್ಟ್ 13, 2023 (www.justkannada.in): ದಕ್ಷಿಣ ಚಿತ್ರರಂಗದ ಹಿರಿಯ ನಟ ಬ್ರಹ್ಮಾನಂದಂ  ಅವರ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

ಹೌದು. ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಜೀವಂತ ನಟನಾಗಿ ಅತಿ ಹೆಚ್ಚು ಸ್ಕ್ರೀನ್ ಕ್ರೆಡಿಟ್‌ಗಳಿಗಾಗಿ ಬ್ರಹ್ಮಾನಂದಂ ಹೆಸರು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

ಬ್ರಹ್ಮಾನಂದಂ ಅವರು 35 ವರ್ಷಗಳ ವೃತ್ತಿಜೀವನದಲ್ಲಿ 6 ರಾಜ್ಯ ನಂದಿ ಪ್ರಶಸ್ತಿಗಳು, ಒಂದು ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಮತ್ತು ಆರು ಸಿನಿಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಬ್ರಹ್ಮಾನಂದಂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ ಒಬ್ಬರು. 67ರ ಹರೆಯದ ಬ್ರಹ್ಮಾನಂದಂ ಅವರ ಸಂಪತ್ತು 367 ಕೋಟಿ ರೂ.ಗಳಾಗಿದ್ದು, ಎಷ್ಟೇ ಸಣ್ಣ ಪಾತ್ರವಾದರೂ ಪ್ರತಿ ಚಿತ್ರಕ್ಕೆ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.