Tuesday, August 4, 2026

BDA Apartments

Home Front Page ವಿಐಪಿ ವಾಹನಗಳ ಮೇಲಿನ ಸೈರನ್ಗಳಿಗೆ ಕಡಿವಾಣ ?: ಮುನ್ಸೂಚನೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ವಿಐಪಿ ವಾಹನಗಳ ಮೇಲಿನ ಸೈರನ್ಗಳಿಗೆ ಕಡಿವಾಣ ?: ಮುನ್ಸೂಚನೆ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಂಗಳೂರು, ಆಗಸ್ಟ್ 13, 2023 (www.justkannada.in): ವಿಐಪಿ ವಾಹನಗಳ ಮೇಲಿನ ಸೈರನ್‌ಗಳಿಗೆ ಕಡಿವಾಣ ಹಾಕಲು ಮುಂದಾಗಿರುವುದಾಗಿ  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಐಪಿ ವಾಹನಗಳ ಮೇಲಿನ ಸೈರನ್‌ಗಳಿಗೆ ಕಡಿವಾಣ ಹಾಕಲು ಮುಂದಾಗಿರುವುದಾಗಿ ಕೇಂದ್ರ ಸಚಿವರು ಮುನ್ಸೂಚನೆ ನೀಡಿದ್ದಾರೆ.

ವಿಐಪಿಗಳ ವಾಹನದ ಮೇಲಿನ ಕೆಂಪು ದೀಪ (ಬೀಕನ್) ಅನ್ನು ಕೊನೆಗೊಳಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈಗ, ನಾನು ವಿಐಪಿ ವಾಹನಗಳ ಸೈರನ್‌ಗಳನ್ನು ಕೊನೆಗೊಳಿಸಲು ಯೋಜಿಸುತ್ತಿದ್ದೇನೆ ಎಂದು ಗಡ್ಕರಿ ಹೇಳಿದ್ದಾರೆ.

ಹಾರ್ನ್, ಸೈರನ್‌ಗಳ ಶಬ್ದವನ್ನು ಭಾರತೀಯ ಸಂಗೀತ ವಾದ್ಯಗಳ ಹಿತವಾದ ಸಂಗೀತದೊಂದಿಗೆ ಬದಲಾಯಿಸಲು ನಾನು ಬಯಸುತ್ತೇನೆ. ಜನರು ಶಬ್ದ ಮಾಲಿನ್ಯದಿಂದ ಮುಕ್ತರಾಗಬೇಕು ಎಂದಿದ್ದಾರೆ.