Tuesday, August 4, 2026

BDA Apartments

Home Front Page ಅತ್ತ ಮಣಿಪುರದಲ್ಲಿ ಸಂತ್ರಸ್ತರು ಕಣ್ಣೀರು ಸುರಿಸುತ್ತಿದ್ದರೆ, ಇತ್ತ ಸಂಸತ್ ‘ನಲ್ಲಿ ಪ್ರಧಾನಿ ಮೋದಿಗೆ ನಗು, ತಮಾಷೆ:...

ಅತ್ತ ಮಣಿಪುರದಲ್ಲಿ ಸಂತ್ರಸ್ತರು ಕಣ್ಣೀರು ಸುರಿಸುತ್ತಿದ್ದರೆ, ಇತ್ತ ಸಂಸತ್ ‘ನಲ್ಲಿ ಪ್ರಧಾನಿ ಮೋದಿಗೆ ನಗು, ತಮಾಷೆ: ರಾಹುಲ್ ಗಾಂಧಿ ವಾಗ್ದಾಳಿ

ಬೆಂಗಳೂರು, ಆಗಸ್ಟ್ 13, 2023 (www.justkannada.in): ಅತ್ತ ಮಣಿಪುರದಲ್ಲಿ ಸಂತ್ರಸ್ತರು ಕಣ್ಣೀರು ಸುರಿಸುತ್ತಿದ್ದ ಇತ್ತ ಸಂಸತ್  ನಲ್ಲಿ ಪ್ರಧಾನಿ ಮೋದಿ 2 ಗಂಟೆ 13 ನಿಮಿಷಗಳ ಕಾಲ ಮಾತನಾಡಿದರು. ನಕ್ಕರು… ಅವರ ಕ್ಯಾಬಿನೆಟ್ ನಕ್ಕಿತು, ತಮಾಷೆಗೆ ನಕ್ಕರು… ಮೋಜು ಮಾಡಿದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ನಾನು ಮತ್ತು INDIA ಮೈತ್ರಿ ಸೇರಿದಂತೆ ಎಲ್ಲದರ ಬಗ್ಗೆ ಎರಡು ಗಂಟೆ ಮಾತನಾಡಿದ್ದಾರೆ. ಆದರೆ, ಮಣಿಪುರದ ಬಗ್ಗೆ ಎರಡು ನಿಮಿಷ ಮಾತನಾಡಿದ್ದಾರೆ ಎಂದು ಎಂದು ರಾಹುಲ್ ಹೇಳಿದರು.

ಸಾವಿರಾರು ಕುಟುಂಬಗಳನ್ನು ನಾಶ ಮಾಡಿದ್ದೀರಿ. ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ನೀಡಿದ್ದೀರಿ. ಸಾವಿರಾರು ಜನರ ಹತ್ಯೆಗೆ ಅವಕಾಶ ನೀಡಿದ್ದೀರಿ ಮತ್ತು ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಾ?’ ಎಂದು ಪ್ರಶ್ನಿಸಿದರು.

ನೀವು ಭಾರತದ ಕಲ್ಪನೆಯನ್ನು ಹೇಗೆ ತಳ್ಳಿಹಾಕುತ್ತೀರಿ?’ ‘ಕಳೆದ ನಾಲ್ಕು ತಿಂಗಳಿಂದ ಏನು ಮಾಡುತ್ತಿದ್ದೀರಿ? ನೀವೇಕೆ ಅಲ್ಲಿಗೆ ಹೋಗಿಲ್ಲ? ನೀವು ಹಿಂಸಾಚಾರವನ್ನು ತಡೆಯಲು ಏಕೆ ಪ್ರಯತ್ನಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.