ಚಾಮರಾಜನಗರ ಆಕ್ಸಿಜನ್ ದುರಂತ: ಸಚಿವರ ವಿರುದ್ಧ ಸಿಎಂ ಬಿಎಸ್ ವೈ ಅಸಮಾಧಾನ…

ಬೆಂಗಳೂರು,ಮೇ,4,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.jk

ಕೊರೋನಾ ನಿರ್ವಹಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಸಚಿವ ಸಂಪುಟ ವಿಶೇಷ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಸಿಎಂ  ಬಿಎಸ್ ಯಡಿಯೂರಪ್ಪ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರಿಗೂ ಅಯಾ ಜಿಲ್ಲೆಯಲ್ಲಿರಲು ಸೂಚನೆ ನೀಡಿದ್ದೆ. ಆದರೆ ಕೆಲಸಚಿವರು ಬೆಂಗಳೂರಿನಲ್ಲಿದ್ದರು. ಕೆಲಸಚಿವರು ಜಿಲ್ಲೆಗಳಲ್ಲಿದ್ರು. ನಿಮ್ಮ ಪ್ರಕಾರ ಕೋವಿಡ್ ನಿರ್ವಹಣೆ ಅಂದ್ರೆ ಇದೇನಾ..? ಎಂದು ಪ್ರಶ್ನಿಸಿದ್ದಾರೆ.chamarajanagar-oxygen-disaster-cm-bs-yeddyurappa-upset-minister

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಗಂಭೀರವಾಗಿತ್ತು. ಅಷ್ಟು ಗಂಭೀರವಾಗಿದ್ದರೂ ಮೊದಲೇ ಗೊತ್ತಾಗ್ಲಿಲ್ಲ ಯಾಕೆ…?  ಬೇರೆ ಬೇರೆ ಜಿಲ್ಲೆಗಳ ಪರಿಸ್ಥಿತಿ ಹೇಗಿದೆ ಗೊತ್ತಿದ್ಯಾ..? ಎಂದು ಸಿಎಂ ಬಿಎಸ್ ವೈ ಸಚಿವರಿಗೆ ಪ್ರಶ್ನಿಸಿದ್ದಾರೆ.

Key words: Chamarajanagar –Oxygen- Disaster-CM BS yeddyurappa- upset – minister.