ಬಿಬಿಎಂಪಿ ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಹೆಸರು ಅಂತಿಮ- ಸಚಿವ ಆರ್.ಅಶೋಕ್ ಸ್ಪಷ್ಟನೆ…

ಬೆಂಗಳೂರು,ಅ,1,2019(www.justkannada.in):  ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದರು.

ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಗೌತಮ್ ಕುಮಾರ್ ಮತ್ತು  ಪದ್ಮನಾಭರೆಡ್ಡಿ ಇಬ್ಬರು ನಾಮಪತ್ರ ಸಲ್ಲಿಸಿರುವ ಹಿನ್ನೆಲೆ ಇಂದು ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ನಾಯಕರು ಕಾರ್ಪೋರೇಟರ್ ಜತೆ ಸಭೆ ನಡೆಸಿದರು. ಈ ವೇಳೆ ಗೌತಮ್ ಕುಮಾರ್ ಮನವೊಲಿಸಲು ಯತ್ನಿಸಿದರು. ಆದರೆ ಗೌತಮ್ ಕುಮಾರ್ ಮನವೊಲಿಕೆಗೆ ಬಗ್ಗದ ಹಿನ್ನೆಲೆ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಮೇಯರ್ ಆಯ್ಕೆ ಸಂಬಂಧ ವಾರದಿಂದ ಸಭೆ ನಡೆಸಿದ್ದವು. ಪದ್ಮನಾಭರೆಡ್ಡಿ ನಾಮಪತ್ರ ವಾಪಸ್ ಪಡೆಯುತ್ತಾರೆ. ಮೇಯರ್ ಅಭ್ಯರ್ಥಿಯಾಗಿ ಗೌತಮ್ ಕುಮಾರ್ ಹೆಸರನ್ನ ಅಂತಿಮಗೊಳಿಸೊಲಾಗಿದೆ.  ಉಪಮೇಯರ್ ಅಭ್ಯರ್ಥಿ  ಇನ್ನೂ ಅಂತಿಮವಾಗಿಲ್ಲ ಎಂದರು.

Key words: Gautam Kumar- name – BBMP-mayor candidate –final-Minister -R. Ashok