ಮೈಸೂರು ಲೋಕಸಭಾ ಕ್ಷೇತ್ರ : ಇಲ್ಲಿ ಜಾತಿ ಪ್ರಭಾವ ಕಡಿಮೆ. ವರ್ಚಸ್ಸಿಗೆ ಮಣೆ

Mysore ̲ mp ̲ election ̲ no ̲̲ caste ̲ politics

ಮೈಸೂರು, ಮಾ.೧೩, ೨೦೨೪ : ಮೈಸೂರು ಲೋಕಸಭಾ ಕ್ಷೇತ್ರ ಸಂಪೂರ್ಣ ಕಾಸ್ಮೋಪಾಲಿಟನ್‌ ಕ್ಷೇತ್ರ. ಜತೆಗೆ ಕೊಡಗು ಸಹ ಸೇರ್ಪಡೆಗೊಂಡಿದೆ. ಈ ಹಿನ್ನೆಲೆಯಲ್ಲಿ ಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿ ಜಾತಿ, ಗೀತಿ ವರ್ಕೌಟ್‌ ಆಗಲ್ಲ.

ಇತಿಹಾಸವನ್ನು ಗಮನಿಸುವುದೇ ಆದರೆ, ಈ ತನಕ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ೧೭ ಬಾರಿ ಚುನಾವಣೆ ನಡೆದಿದೆ. ಈ ಪೈಕಿ ಕಾಂಗ್ರೆಸ್‌ ಪಕ್ಷ  ೧೨ ಚುನಾವಣೆಗಳಲ್ಲೂ, ಬಿಜೆಪಿ ಮೂರು ಹಾಗೂ ಕೆಂಎಂಪಿಪಿ ಮತ್ತು ಕಾಂಗ್ರೆಸ್‌ ಐ ತಲಾ ಒಂದು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.

1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)

1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್ )

 

1962- ಎಂ.ಶಂಕರಯ್ಯ (ಕಾಂಗ್ರೆಸ್)

1967- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)

1971 – ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)

1977- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)

1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)

1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ( ಕಾಂಗ್ರೆಸ್)

1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)

1991- ಚಂದ್ರಪ್ರಭ ಅರಸು ( ಕಾಂಗ್ರೆಸ್)

1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)

1998- ಸಿ.ಎಚ್. ವಿಜಯಶಂಕರ್ (ಬಿಜೆಪಿ)

1999- ಶ್ರೀಕಂಠದತ್ತನರಸಿಂಹರಾಜ ಒಡೆಯರ್ ( ಕಾಂಗ್ರೆಸ್)

2004- ಸಿ.ಎಚ್. ವಿಜಯಶಂಕರ್ (ಬಿಜೆಪಿ)

2009- ಎಚ್. ವಿಶ್ವನಾಥ್ (ಕಾಂಗ್ರೆಸ್)

2014- ಪ್ರತಾಪ್ ಸಿಂಹ (ಬಿಜೆಪಿ)

2019 – ಪ್ರತಾಪ್‌ ಸಿಂಹ (ಬಿಜೆಪಿ)

‌ಈ ಪೈಕಿ ಎಂ.ಎಸ್. ಗುರುಪಾದಸ್ವಾಮಿ, ಎಂ. ರಾಜಶೇಖರಮೂರ್ತಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾದರೆ, ಎಚ್.ಡಿ. ತುಳಸಿದಾಸ್ ಹಾಗೂ ಪ್ರತಾಪ್‌ ಸಿಂಹ ಒಕ್ಕಲಿಗ ಸಮದಾಯದವರು. ಎನ್. ರಾಚಯ್ಯ, ಎಸ್. ಎಂ.ಸಿದ್ದಯ್ಯ ದಲಿತ ಸಮುದಾಯದವರು. ಎಂ.ಶಂಕರಪ್ಪ ದೇವಾಂಗ ಜನಾಂಗದವರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹಾಗೂ ಚಂದ್ರ ಪ್ರಭ ಅರಸು ಅವರು ಅರಸು ಸಮುದಾಯಕ್ಕೆ ಸೇರಿದವರು. ಸಿ.ಎಚ್.ವಿಜಯಶಂಕರ್‌ ಹಾಗೂ ಅಡಗೂರು ಎಚ್.ವಿಶ್ವನಾಥ್‌ ಕುರುಬ ಸಮುದಾಯಕ್ಕೆ ಸೇರಿದವರು.

ಈ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರು ಜಾತಿ ಪ್ರಮುಖ ಪಾತ್ರ ವಹಿಸಿಲ್ಲ. ಸಮಾಜದ ಎಲ್ಲ ವರ್ಗದ ಜನರು ಇಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ. ಇದೇ ಈ ಕ್ಷೇತ್ರದ ವಿಶೇಷತೆ.

key words : Mysore ̲ mp ̲ election ̲ no ̲̲ caste ̲ politics