Tuesday, September 22, 2026

BDA Apartments

ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗ ಆಗಿದ್ದೆ ಎಂದ ಸೋನು ನಿಗಮ್ BDA JK_Adv BDA Adv
Home Cinema ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗ ಆಗಿದ್ದೆ ಎಂದ ಸೋನು ನಿಗಮ್

ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗ ಆಗಿದ್ದೆ ಎಂದ ಸೋನು ನಿಗಮ್

ಬೆಂಗಳೂರು, ಫೆಬ್ರವರಿ 27, 2020 (www.justkannada.in): 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಕನ್ನಡದ ಬಗ್ಗೆ ಮಾತನಾಡಿದ್ದಾರೆ.

ನಾನು ನನ್ನ ಹಿಂದಿನ ಜನ್ಮದಲ್ಲಿ ಕನ್ನಡಿಗ ಆಗಿದ್ದೇ ಎಂದು ಬಲವಾಗಿ ನಂಬುತ್ತೇನೆ. ಯಾಕೆಂದ್ರೆ, ನಾನು ಹಿಂದಿ ಹಾಡು ಹಾಡಲು ಬಂದಿದ್ದೆ. ಆದರೆ, ಹಿಂದಿಗಿಂತ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕನ್ನಡ ಜನರ ಬಗ್ಗೆ ನನಗೆ ತುಂಬ ಗೌರವ ಇದೆ. ನಿಮ್ಮ ಪ್ರೀತಿ ಪಡೆಯಲು ಹೆಮ್ಮೆ ಆಗುತ್ತದೆ ಎಂದಿದ್ದಾರೆ ಈ ಗಾಯಕ.

ನಾನು ಯಾವುದೇ ದೇಶದಲ್ಲಿ ಕಾರ್ಯಕ್ರಮ ಮಾಡುತ್ತಿದ್ದರೂ, ಒಂದು ಧ್ವನಿ ಜೋರಾಗಿ ‘ಕನ್ನಡ’ ಎಂದು ಬರುತ್ತದೆ. ಆಗ ನಾನು ‘ಅನಿಸಿಸುತ್ತಿದೆ ಯಾಕೋ ಇಂದು..” ಅಂತ ಹಾಡು ಹಾಡುತ್ತೇನೆ ಎಂದು ಸ್ಮರಿಸಿದ್ದಾರೆ ಸೋನು.