ನನ್ನ ದೇಹದಲ್ಲಿ ಶಕ್ತಿ ತಾಕತ್ತು ಇದೆ ಅಂದ್ರೆ ಅದು ಮಹಾರಾಷ್ಟ್ರದ್ದು: ಮಹಾರಾಷ್ಟ್ರಕ್ಕೆ ಜೈಕಾರ ಕೂಗಿದ ಸಚಿವ ನಾರಾಯಣಗೌಡ…

ಮಂಡ್ಯ,ಫೆ,27,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿರುವ ನೂತನ ಸಚಿವ ನಾರಾಯಣಗೌಡ ಮಹಾರಾಷ್ಟ್ರ ಪ್ರೇಮವನ್ನ ಮೆರೆದಿದ್ದಾರೆ.

ಫೆಬ್ರವರಿ 20 ರಂದು ಮಂಡ್ಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ  ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಕೂಗಿರುವ ವಿಡಿಯೋ ವೈರಲ್ ಆಗಿದೆ. ರಾಷ್ಟ್ರೀಯ ಭಾವೈಕ್ಯತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ಮಾತನಾಡಿದ್ದ ಸಚಿವ ನಾರಾಯಣಗೌಡ,  ಮುಂಬೈಗೆ ಹೋಗಿ ಉದ್ಯಮಿ, ಬಿಲ್ಡರ್ ಆಗಿದ್ದೇನೆ. ಅಮೇಲೆ ಇಲ್ಲಿಗೆ ಬಂದು ನಾನು ರಾಜಕಾರಣಿಯಾಗಿದ್ದೇನೆ. ಹೀಗಾಗಿ ನಾನು ಜೈ ಮಹಾರಾಷ್ಟ್ರ ಜೈ ಶೀವಾಜಿ ಎನ್ನುತ್ತೇನೆ ಎಂದಿದ್ದು ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಅಲ್ಲದೆ ನನ್ನ ದೇಹದಲ್ಲಿ ಶಕ್ತಿ ತಾಕತ್ತು ಇದೆ ಅಂದ್ರೆ ಅದು ಮಹಾರಾಷ್ಟ್ರದ್ದು. ಹಾಗಾಗಿ ವೇದಿಕೆ ಮೇಲೆಯೇ ಜೈ ಶಿವಾಜಿ,ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುತ್ತೇನೆ ಎಂದು ಹೇಳುವ ಮೂಲಕ ತನ್ನ  ಮಹಾರಾಷ್ಟ್ರ ಪ್ರೇಮವನ್ನ ನಾರಾಯಣಗೌಡ ತೋರ್ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮರಾಠಿಗರು ಇದ್ದರು ಎನ್ನಲಾಗಿದೆ.

Key words: energy- my body – Maharashtra- jai Maharashtra-   Minister Narayana Gowda- mandya