ಕ್ರಿಕೆಟ್ ಬಳಿಕ ಕೃಷಿಕನಾದ ಕೂಲ್ ಕ್ಯಾಪ್ಟನ್ ಧೋನಿ

ಜಾರ್ಖಂಡ್, ಫೆಬ್ರವರಿ 27, 2020 (www.justkannada.in): ಮಹೇಂದ್ರ ಸಿಂಗ್ ಧೋನಿ ಈಗ ಕ್ರಿಕೆಟಿಗನಲ್ಲದೆ ಕೃಷಿಕನೂ ಆಗಿದ್ದಾರೆ.

ಧೋನಿ ಈ ದಿನಗಳಲ್ಲಿ ಕಲ್ಲಂಗಡಿ ಮತ್ತು ಪಪ್ಪಾಯಿಯನ್ನು ಬೆಳೆಸುತ್ತಿರುವುದು ಕಂಡುಬರುತ್ತಿದೆ. ಇದನ್ನು ಸೋಶಿಯಲ್ ಮೀಡಿಯಾ ಮೂಲಕ ಬೇರಾರೂ ಅಲ್ಲ ಸ್ವತಃ ಧೋನಿಯವರೇ ಬಹಿರಂಗಪಡಿಸಿದ್ದಾರೆ.

ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿರುವ ಧೋನಿ, ‘ರಾಂಚಿಯಲ್ಲಿ 20 ದಿನಗಳಲ್ಲಿ ನಾನು ಕಲ್ಲಂಗಡಿ ಮತ್ತು ಪಪ್ಪಾಯದ ಸಾವಯವ ಕೃಷಿಯನ್ನು ಪ್ರಾರಂಭಿಸಿದ್ದೇನೆ, ಇದೇ ಮೊದಲ ಬಾರಿಗೆ ನಾನು ಅದರ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ’ ಎಂದು ಬರೆದಿದ್ದಾರೆ.